ಶಿಡ್ಲಘಟ್ಟ ತಾಲ್ಲೂಕು ಹಂಡಿಗನಾಳದಲ್ಲಿ ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಅಟಲ್ ಭೂ ಜಲ್ ಯೋಜನೆಯ ಅನುಷ್ಠಾನದ ಕಾರ‍್ಯಾಗಾರದಲ್ಲಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ಅಂತರ್ಜಲ ಹೆಚ್ಚಿಸಲು ಎಲ್ಲರ ಸಹಕಾರ ಅತ್ಯಗತ್ಯ. ಎಲ್ಲೆಡೆ ಗೋಮಾಳಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಕೇಂದ್ರ ಸರ್ಕಾರದ ಅಟಲ್ ಭೂ ಜಲ್ ಯೋಜನೆಯಡಿ 1200 ಕೋಟಿ ರೂಗಳು ಬಿಡುಗಡೆಯಾಗಿದ್ದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 200 ಕೋಟಿ ರೂ ಅನುದಾನ ಬಂದಿದ್ದು ಇದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸುವರ್ಣ ಅವಕಾಶ ನಮ್ಮೆಲ್ಲರಿಗೂ ದೊರೆತಿದೆ ಎಂದು ಅವರು ತಿಳಿಸಿದರು.
ನರೇಗಾ ಜತೆಗೆ ಈ ಯೋಜನೆಯು ಈ ಎರಡೂ ಜಿಲ್ಲೆಗಳಿಗೆ ವರದಾನವಾಗಲಿದ್ದು ಅಧಿಕಾರಿಗಳು ಜನಪ್ರತಿ ನಿಧಿಗಳು ಪ್ರಾಮಾಣಿಕವಾಗಿ ಕಾರ‍್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಮಳೆಗಾಲದಲ್ಲಿ ಜನಪ್ರತಿನಿಧಿಗಳು ಮನೆಯಲ್ಲಿ ಕೂರದೆ ಸುತ್ತಾಡಿದಾಗ ಎಲ್ಲೆಲ್ಲಿ ಮಳೆ ನೀರು ಹರಿಯುತ್ತಿದೆ ಎಲ್ಲಿ ಸಂರಕ್ಷಣೆ ಮಾಡಿ ಇಂಗಿಸಬೇಕೆಂಬುದು ಗೊತ್ತಾಗಲಿದ್ದು ಅಧಿಕಾರಿಗಳೊಂದಿಗೆ ಸೇರಿ ಕಾರ‍್ಯರೂಪಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ‍್ಯದರ್ಶಿ ಶಿವಕುಮಾರ್ ಮಾತನಾಡಿ, ಅಟಲ್ ಭೂ ಜಲ್ ಯೋಜನೆಯ ಉದ್ದೇಶವನ್ನು ವಿವರಿಸಿ ನೀರಿನ ಮೂಲಗಳನ್ನು ಅಥವಾ ಅಂತರ್ಜಲವನ್ನು ಅದರ ಸ್ವರೂಪ ಬದಲಿಸದೆ ಮಲಿನಗೊಳಿಸದೆ ಸದ್ಬಳಕೆ ಮಾಡಿಕೊಳ್ಳುವುದು. ನಾವು ಬಳಸಿಕೊಂಡು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಮೂಲಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಶಾಸಕ ವಿ.ಮುನಿಯಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ.ನಂದೀಶ್, ಕೇಂದ್ರ ಅಂತರ್ಜಲ ಮಂಡಳಿಯ ವಿಜ್ಞಾನಿ ಆನಂದ್, ಬೋರಪ್ಪ, ಶ್ರೀಧರ್, ಕೃಷಿ ಉಪ ನಿರ್ದೆಶಕಿ ಅನುರೂಪ, ತಹಸೀಲ್ದಾರ್ ರಾಜೀವ್, ಇಒ ಚಂದ್ರಕಾಂತ್, ವೆಡ್ ಸಂಸ್ಥೆಯ ಸೌಮ್ಯ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi