Appegowdanahalli, sidlaghatta : TV, Mobile ನೋಡುವುದನ್ನು ಕಡಿಮೆ ಮಾಡಿಸಿ ಕನ್ನಡ ಪುಸ್ತಕಗಳನ್ನು ಓದುವ, ಬರೆಯುವ ಹವ್ಯಾಸವನ್ನು ರೂಡಿಸಿಕೊಳ್ಳವಂತೆ ಪೋಷಕರು ಮಕ್ಕಳ ಬಗ್ಗೆ ನಿಗಾ ಇಡಬೇಕು ಹಾಗು ಎಲ್ಲಾರು ಕನ್ನಡವನ್ನು ಬೆಳಗಿಸುವಂತಹ ಕಾರ್ಯ ಮಾಡಬೇಕೆಂದು ಪೌರಾಯುಕ್ತ ಆರ್. ಶ್ರೀಕಾಂತ್ ಮನವಿ ಮಾಡಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಇಂದಿರಾಗಾಂಧಿ ವಸತಿಶಾಲೆಯಲ್ಲಿ 09 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಆಯೋಜಿಸಲಾಗಿದ್ದು ಬೆಳಗ್ಗೆ 8 ಗಂಟೆಗೆ ನಗರಸಭೆ ಪೌರಾಯುಕ್ತ ಆರ್. ಶ್ರೀಕಾಂತ್ ರವರು ರಾಷ್ಟ್ರದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಗರಸಭೆ ಅದ್ಯಕ್ಷರಾದ ಸುಮಿತ್ರಾ ರಮೇಶ್ ರವರು ನಾಡದ್ವಜಾರೋಹಣವನ್ನು ಅಮೃತ ಹಸ್ತದಿಂದ ನೆರವೇರಿಸಿದರು. ಮತ್ತು ಪರಿಷತ್ತಿನ ದ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅದ್ಯಕ್ಷ ಬಿ ಆರ್ ಅನಂತಕೃಷ್ಣ ರವರು ನೆರವೇರಿಸಿದರು.
ದೈಹಿಕ ಶಿಕ್ಷಕರು, ಭಾರತ ಸೇವಾದಳ, ಎನ್ ಸಿ ಸಿ, ಸ್ಕೌಟ್ ಅಂಡ್ ಗೈಡ್ಸ್ ಮತ್ತು ಶಾಲಾ ಮಕ್ಕಳಿಂದ ನೆರವೇರಿಸಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅದ್ಯಕ್ಷ ತ್ಯಾಗರಾಜು,ಇಂದಿರಾಗಾಂಧಿ ವಸತಿ ಶಾಲಾ ಪ್ರಾಂಶುಪಾಲರಾದ ಜಯಶ್ರೀ, ಪಟೇಲ್ ನಾರಾಯಣಸ್ವಾಮಿ, ನಗರಸಭೆಯ ಪ್ರಭಾರ ಆರೋಗ್ಯ ನಿರೀಕ್ಷಕರಾದ ಮುರಳಿ, ಸತೀಶ್, ರಾಮಾಂಜಿ ಮುಂತಾದವರು ಹಾಜರಿದ್ದರು.