ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ತರಿಸಲಾಗಿದ್ದ ಜೀವರಕ್ಷಕ ಔಷಧಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೋವಿಡ್ ರೋಗಿಗಳೆಲ್ಲರೂ ಅವಲಂಬಿಸಿರುವುದು ಸರ್ಕಾರಿ ಆಸ್ಪತ್ರೆಯನ್ನು. ಏನೇ ಸರ್ಕಾರಿ ನೆರವಿದ್ದರೂ ಇಲ್ಲಿನ ಅವಶ್ಯಕತೆಗಳನ್ನು ಗಮನಿಸಬೇಕಾದ್ದು ಹಾಗೂ ಕುಟುಂಬದಿಂದ ದೂರವುಳಿದು ಹಗಲಿರುಳೂ ಶ್ರಮಿಸುವ ಆರೋಗ್ಯ ಸಿಬ್ಬಂದಿಯ ಕಷ್ಟ ಸುಖಕ್ಕೆ ಸ್ಪಂದಿಸುವುದು, ಬೆಂಬಲಿಸುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ.
ತಾಲ್ಲೂಕು ಆರೋಗ್ಯಾಧಿಕಾರಿಗಳು ಕೇಳಿದ್ದ ಸುಮಾರು ಐದು ಲಕ್ಷ ರೂಗಳ ಜೀವರಕ್ಷಕ ಔಷಧಿಗಳನ್ನು ನೀಡುತ್ತಿದ್ದೇವೆ. ಇದರಿಂದ ಆಸ್ಪತ್ರೆಗೆ ಬರುವ ಕೋವಿಡ್ ರೋಗಿಗಳ ಆರೋಗ್ಯ ವೃದ್ಧಿಯಾಗಿ ಅವರು ಸುರಕ್ಷಿತವಾಗಿ ಮನೆಗೆ ಮರಳುವಂತಾಗಲಿ ಎಂದು ಅವರು ತಿಳಿಸಿದರು.
ಕೋವಿಡ್ ರೋಗಲಕ್ಷಣಗಳಿದ್ದರೆ ದಯಮಾಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಇದರಿಂದ ನಿಮಗೂ ಮತ್ತು ನಿಮ್ಮ ಸುತ್ತಲಿನವರಿಗೂ ಅನುಕೂಲ. ಬೆಂಗಳೂರಿನಲ್ಲಿ ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇಲ್ಲಿ ನೋಡಿದರೆ ಇನ್ನೂ ಅನೇಕ ಮಂದಿ ಲಸಿಕೆಯನ್ನೇ ಪಡೆದಿಲ್ಲ. ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋವಿಡ್ ಮಣಿಸಲು ಸಹಾಯಕವಾಗುತ್ತದೆ. ದಯಮಾಡಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿಸಿದರು.
ನಗರ ಆರೋಗ್ಯಾಧಿಕಾರಿ ಡಾ.ವಾಣಿ ಮಾತನಾಡಿ, ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಕೋವಿಡ್ ರೋಗಿಗಳಿಗೆ ಅವಶ್ಯಕವಾದ ಆಮ್ಲಜನಕ ಸಿಲಿಂಡರುಗಳನ್ನು ಕೊಟ್ಟಿದ್ದಾರೆ. ಈಗ ನಮಗೆ ಅಗತ್ಯವಿರುವ ಔಷಧಿಗಳನ್ನು ಪೂರೈಸಿದ್ದಾರೆ. ಇದರಿಂದ ನಾವುಗಳು ರೋಗಿಗಳಿಗೆ ಚಿಕಿತಸೆ ನೀಡಲು ತುಂಬಾ ಅನುಕೂಲವಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಕಬಾಡಿ, ನಗರಸಭೆ ಸದಸ್ಯ ಶಬ್ಬೀರ್, ಬಸ್ ಮಂಜಣ್ಣ, ಕೆ.ಪಿ.ಸಿ.ಸಿ ಸದಸ್ಯ ನಾರಾಯಣಸ್ವಾಮಿ ಬಂಗಾರಪ್ಪ, ಆನಂದ್, ಸುಮೀರ್, ಬಾಬು ಹುಸೇನ್, ನೂರುಲ್ಲಾ, ದೇವರಾಜು ಹಾಜರಿದ್ದರು.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta