ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜಕದಿರೇನಹಳ್ಳಿ ಗೇಟ್ ಬಳಿಯಿರುವ ತೋಟದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಆಂಜಿನಪ್ಪ (ಪುಟ್ಟು) ಮಾತನಾಡಿದರು.
ಅಧಿಕಾರ ಇರಲಿ, ಇಲ್ಲದಿರಲಿ ಜನಸೇವೆಯೇ ನನ್ನ ಗುರಿ. ನಾನು ಕಾಂಗ್ರೆಸ್ ಪಕ್ಷದ ಟಿಕೇಟ್ ಗಾಗಿ ಲಾಭಿಮಾಡುವುದಿಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತೇನೆ ಎಂದು ಮುಖಂಡ ಆಂಜಿನಪ್ಪ ಪುಟ್ಟು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಒಂದು ದೇವಸ್ಥಾನವಿದ್ದಂತೆ. ಅಲ್ಲಿಗೆ ನಿಮ್ಮನ್ನು ಮತದಾರರು ಆಯ್ಕೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ. ನೀವು ಅದನ್ನು ಕಲುಷಿತ ಮಾಡದೆ ಜನರ ಕಲಸ ಕಾರ್ಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ವಿಜೇತರಿಗೆ ಕಿವಿಮಾತು ಹೇಳಿದರು..
ನಾನು ಚುನಾವಣಾ ಪೂರ್ವದಲ್ಲಿ ಮತ್ತು ಚುನಾವಣಾ ನಂತರದಲ್ಲಿ ಈ ಕ್ಷೇತ್ರದಲ್ಲಿ ಇದ್ದುಕೊಂಡು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಮಾಡುತ್ತೇನೆ. ನಮ್ಮ ಶಾಸಕರಾದ ವಿ. ಮುನಿಯಪ್ಪನವರ ಮಾರ್ಗದರ್ಶನದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ಸಲಹೆಯಂತೆ ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ರಾಯಪ್ಪನಹಳ್ಳಿ ಅಶ್ವತ್ಥ್ ನಾರಾಯಣರೆಡ್ಡಿ ಮಾತನಾಡಿ, ಕಾಂಗ್ರೆಸ್ ಗೆ ದಿಕ್ಕಿಲ್ಲದ ಸಂದರ್ಭದಲ್ಲಿ ಆಂಜಿನಪ್ಪ ಪುಟ್ಟು ನಾಯಕತ್ವ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಬ್ಲೂಡು ನಾರಾಯಣಸ್ವಾಮಿ ಮಾತನಾಡಿ, ಪಕ್ಷದಲ್ಲಿರುವ ಒಡಕುಗಳನ್ನು ಮರೆತು, ಒಗ್ಗಾಟಾಗಿ ಪಕ್ಷಕ್ಕೆ ದುಡಿದು ಆಂಜಿನಪ್ಪ ಪುಟ್ಟು ಅವರ ಕೈ ಬಲಪಡಿಸಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ವಿ. ಮುನಿಯಪ್ಪ ಅವರು ಅನಾರೋಗ್ಯದ ಕಾರಣ ಸಾರಥ್ಯವನ್ನು ಆಂಜಿನಪ್ಪ ಪುಟ್ಟು ವಹಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್, ಆನೆಮಡುಗು ಶಿವಣ್ಣ, ಗುಡಿಹಳ್ಳಿ ನಾರಾಯಣಸ್ವಾಮಿ, ಸಾದಲಿ ಪ್ರಮೋದ್, ಜಪ್ತಿ ಹೊಸಹಳ್ಳಿ ಪ್ರಕಾಶ್, ಅಫ್ಸರ್, ಚಾಂದ್ ಪಾಷ, ನವೀದ್, ನಾಗೇಶ್, ಆನೂರು ದೇವರಾಜ್, ನಾರಾಯಣ ಸ್ವಾಮಿ, ಮಂಜುನಾಥ್, ಗಂಬೀರನಹಳ್ಳಿ ಪ್ರದೀಪ್, ಗಂಗನಹಳ್ಳಿ ವೆಂಕಟೇಶ್, ಸಾದಲಿ ಗೋವಿಂದ ರಾಜು, ಅಬ್ಲೂಡು ಶ್ರೀನಿವಾಸ ಹಾಜರಿದ್ದರು.