ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಗ್ರಾಮದ ಪ್ರಗತಿಪರ ರೈತ ಬೈರಾರೆಡ್ಡಿ ಅವರು ಅತ್ಯುತ್ತಮವಾಗಿ ಬೀಟ್ ರೂಟ್ ಬೆಳೆ ಬೆಳೆದ ಹಿನ್ನೆಲೆಯಲ್ಲಿ ಮೈಕೋ ಕಂಪನಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕಿನ ಆನೆಮಡಗು ಪ್ರಗತಿಪರ ರೈತ ಬೈರಾರೆಡ್ಡಿ ಮೈಕೋ ಕಂಪನಿ ಮಾರ್ಗದರ್ಶನದಲ್ಲಿ 5 ಎಕರೆಯಲ್ಲಿ ಮೈಕೋ ಲಾಲ್ ಬಿತ್ತನೆಯನ್ನು ಬಳಸಿ ಜಿಲ್ಲೆಯಲ್ಲಿಯೇ ಉತ್ತಮ ಬೀಟ್ರೂಟ್ ಬೆಳೆ ಬೆಳೆದಿದ್ದಾರೆ.
ಮೈಕೋ ಕಂಪನಿಯ ಮಾರ್ಗದರ್ಶಕ ಅಶೋಕ್ ಮಾತನಾಡಿ, ಇದು ರೈತರಿಗೆ ಉತ್ತಮ ವರದಾನ ಬೆಳೆಯಾಗಿದೆ. ಮೈಕೋ ಲಾಲ್ ಬಿತ್ತನೆಯಿಂದ ಒಂದು ಎಕರೆಗೆ 55 ರಿಂದ 60 ಕ್ವಿಂಟಾಲ್ ಬೆಳೆಯಬಹುದು. ಈ ಬಿತ್ತನೆಯಿಂದ ಬೆಳೆಯುವ ಬೀಟ್ರೂಟಿಗೆ ಹೆಚ್ಚಿನ ಔಷಧಿಗಳ ಸಿಂಪಡನೆ ಬೇಕಿಲ್ಲ. ಈ ಬೆಳೆ ಆಪಲ್ ಆಕಾರದಲ್ಲಿ ಇದ್ದು, ವ್ಯಾಪಾರಸ್ಥರಿಗೆ ಆಕರ್ಷಣೀಯವಾಗಿ ಕಾಣುತ್ತದೆ ಹಾಗೂ ಉತ್ತಮ ಬೆಲೆ ಕೂಡ ಸಿಗುತ್ತದೆ. ಬೀಟ್ರೂಟ್ ಮಾರುವ ಸಮಯದಲ್ಲಿ ಬೆಲೆ ಕಡಿಮೆ ಇದ್ದಲ್ಲಿ ತೋಟದಲ್ಲಿ 20 ದಿನಗಳ ಕಾಲ ಬೆಳೆಯನ್ನು ಇಡಬಹುದು. ಬೀಟ್ರೂಟ್ ಬೆಳೆ ರೈತರಿಗೆ ವರದಾನವಾದ ಬೆಳೆಯಾಗಿದ್ದು ವರ್ಷಪೂರ್ತಿ ಕಡಿಮೆ ವೆಚ್ಚದಲ್ಲಿ ಬೆಳೆಯುವ ಬೆಳೆ ಇದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತೋಟದ ಮಾಲೀಕ ಬೈರಾರೆಡ್ಡಿ, ಆಟ ಗೊಲ್ಲಳ್ಳಿ ಮದ್ದ ರೆಡ್ಡಿ, ಮೈಕೋ ಕಂಪನಿ ಉಮೇಶ್, ರವಿಕುಮಾರ್, ಸುತ್ತಮುತ್ತಲ ತೋಟಗಳ ರೈತರು ಹಾಜರಿದ್ದರು.