Timmanayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಪುನರ್ನಿರ್ಮಾಣದ ಕಾಮಗಾರಿ ಪ್ರಗತಿ ಹಾಗು ಗುಣಮಟ್ಟವನ್ನು ಪರಿಶೀಲಿಸಲು ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗು ಯುವಶಕ್ತಿ ಪದಾಧಿಕಾರಿಗಳು ಮಂಗಳವಾರ ಭೇಟಿ ಕಾಮಗಾರಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಆರ್. ಆಂಜನೇಯರೆಡ್ಡಿ ಮಾತನಾಡಿ, ಡಿ.ಪಿ.ಆರ್ ಪ್ರಕಾರ ಇನ್ನೂ ಅನೇಕ ಕೆಲಸಗಳು ಬಾಕಿ ಇದ್ದು, ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ರೈತರಿಗೆ ಅನುಕೂಲವಾಗುವಂತೆ ಸರ್ವಿಸ್ ರಸ್ತೆಗಳನ್ನು ಮಾಡಬೇಕಿದೆ. ಕಟ್ಟೆ ಒಡೆದು ಕೊಚ್ಚಿ ಹೋದ ರೈತರ ಜಮೀನಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಅಚ್ಚುಕಟ್ಟು ರೈತರು ಕೆರೆ ಪುನರ್ನಿಮಾಣಕ್ಕೆ ಮಾಡಿದ ಹೋರಾಟ ಹಾಗು ಕಾಮಗಾರಿ ಗುಣಮಟ್ಟ ಕಾಯುತ್ತಿರುವುದು ಎಲ್ಲರಿಗು ಮಾದರಿಯಾಗಿದೆ. ಬಯಲುಸೀಮೆಯ ಎಲ್ಲಾ ಕೆರೆಗಳನ್ನು ಇದೆ ರೀತಿ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಯುಬಶಕ್ತಿ ಸಂಘಟನೆಯ ಉಪಾಧ್ಯಕ್ಷ ವಿಜಯ ಬಾವರೆಡ್ಡಿ, ಮುಖಂಡರಾದ ಬಿ. ಶಿವಕುಮಾರ್, ಜೀವಿಕ ಮುನಿಯಪ್ಪ, ಟಿ.ಎನ್. ಬಚ್ಚರೆಡ್ಡಿ, ಆನೆಮಡಗು ದೇವರಾಜ್, ಬೈರೇಗೌಡ, ಶ್ರೀರಾಮ್, ನರಸಿಂಹರೆಡ್ಡಿ, ಚಂದ್ರಣ್ಣ, ಅನೀತಮ್ಮ , ಎನ್.ಶ್ರೀನಿವಾಸ್ ಹಾಗು ಅಚ್ಚುಕಟ್ಟಿನ ರೈತರು ಹಾಜರಿದ್ದರು.