Home News ಚಲನಚಿತ್ರ ನಟ ರಾಮ್ ಚರಣ್ ತೇಜ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

ಚಲನಚಿತ್ರ ನಟ ರಾಮ್ ಚರಣ್ ತೇಜ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

0
Actor Ram Charan Birthday Blood Donation Camp

Sidlaghatta : ಮೆಗಾ ಕುಟುಂಬದ ಹೆಸರಿನಲ್ಲಿ ಪ್ರತಿವರ್ಷ ಉತ್ತಮವಾದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಆ ಕುಟುಂಬದ ಒಬ್ಬೊಬ್ಬರ ಹುಟ್ಟು ಹಬ್ಬ ಬಂದಾಗ ಕರ್ನಾಟಕಾದ್ಯಂತ ಒಂದೊಂದು ತಾಲ್ಲೂಕಿನಲ್ಲಿ ರಕ್ತದಾನ ಶಿಬಿರಗಳು, ಬಡವರಿಗೆ ಸಹಾಯ ಮಾಡುವ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘದ ರಾಜ್ಯಾಧ್ಯಕ್ಷ ಮುರಳಿಗೌಡ ಹೇಳಿದರು.

ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯದಲ್ಲಿ ಭಾನುವಾರ ತೆಲುಗು ಚಲನಚಿತ್ರ ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ್ ರವರ 39 ನೇ ಹುಟ್ಟು ಹಬ್ಬದ ಅಂಗವಾಗಿ ಅಖಿಲ ಕರ್ನಾಟಕ ಚಿರಂಜೀವಿ ಯೂತ್ ಮೆಗಾ ಪವರ್ ಫ್ಯಾನ್ಸ್ ಅಸೋಸಿಯೇಷನ್ ಹಾಗೂ ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ ಅಭಿಮಾನಿಗಳ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಮೇಗಾ ಕುಟುಂಬದ ಸಂಘಟನೆಗಳ ಪದಾಧಿಕಾರಿಗಳು ರಕ್ತದಾನ ಮಾಡುವ ಮೂಲಕ ಪ್ರಾಣಾಪಾಯದ ಅಂಚಿನಲ್ಲಿರುವರನ್ನು ರಕ್ಷಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲೂ ಪವನ್ ಕಲ್ಯಾಣ್ ಅಭಿಮಾನಿಗಳು, ಚಿರಂಜೀವಿ ಅಭಿಮಾನಿಗಳು ಹಾಗೂ ರಾಮಚರಣ್ ಅಭಿಮಾನಿಗಳು ಸೇರಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕರ್ನಾಟಕದಲ್ಲಿ ಉತ್ತಮ ಹೆಸರು ಮಾಡಬೇಕೆಂದರು.

ಕಾರ್ಯಕ್ರಮದ ಆಯೋಜಕರಾದ ಅಖಿಲ ಕರ್ನಾಟಕ ಚಿರಂಜೀವಿ ಯುವ ಕಾರ್ಯದರ್ಶಿ, ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಜೆ.ವಿ.ದಿನೇಶ್ ಬಾಬು ಮಾತನಾಡಿ, ಚಿರಂಜೀವಿರವರ ಹೇಸರಿನಲ್ಲಿ ನಾಲ್ಕು ಬಾರಿ, ಪವನ್ ಕಲ್ಯಾಣ್ ರವರ ಹೆಸರಲ್ಲಿ ಎರಡು ಬಾರಿ ರಾಮ್ ಚರಣ್ ರವರ ಹೆಸರಿನಲ್ಲಿ ಎರಡು ಬಾರಿ ರಕ್ತದಾನ ಶಿಬಿರಗಳನನ್ನು ಮಾಡಿದ್ದೇವೆ. ಈಗ ಎಂಟನೇ ಭಾರಿ ಈ ಕಾರ್ಯಕ್ರಮವನ್ನು ಅಯೋಜಿಸಿದ್ದೇವೆ ಎಂದರು.

ಅಭಿಮಾನಿಗಳು ಹಾಗೂ ಸಾರ್ವಜನಿಕರು 36 ಯೂನಿಟ್ ರಕ್ತದಾನ ಮಾಡಿದರು. ಮೆಗಾ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.

ಸಂಗ್ರಹಿಸಿದ 36 ಯುನಿಟ್ ರಕ್ತವನ್ನು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಉಪಧ್ಯಕ್ಷ ಕಿರಣ್‌ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಜೇಂದ್ರನಾಯಕ್, ಗೌರವಾಧ್ಯಕ್ಷ ಜೆ.ವಿ.ದಿನೇಶ್ ಬಾಬು, ರಾಜ್ಯ ಕಾರ್ಯದರ್ಶಿ ಹರೀಶ್, ಸಂಚಾಲಕ ಮುರಳಿ, ರಾಜ್ಯ ಸದಸ್ಯ ಸಂತೋಷ್, ಜಿಲ್ಲಾ ಅಧ್ಯಕ್ಷ ಜಿ.ನಾಯಕ್, ತಾಲ್ಲೂಕು ಅಧ್ಯಕ್ಷ ಪ್ರದೀಪ್ ಜಾನಿ, ಚೌಡಸಂದ್ರ ಶ್ರೀನಿವಾಸ್, ಗೋಪಾಲ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version