ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ‘ಯೋಧ ನಮನ’ ಕಾರ್ಯಕ್ರಮವನ್ನು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜಿನ ಆವರಣದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಂಡಿದ್ದಾರೆ.
ರಾಷ್ಟ್ರಪತಿಗಳ ಗ್ಯಾಲಂಟರಿ ಸೇನಾ ಮೆಡಲ್ ಪುರಸ್ಕೃತ ಹಾಗೂ ಕಾರ್ಗಿಲ್ ವೀರ ಯೋಧ ಕ್ಯಾ.ನವೀನ್ ನಾಗಪ್ಪ ತಾವು ಭಾಗವಹಿಸಿದ್ದ ಕಾರ್ಗಿಲ್ ಯುದ್ಧದ ಕುರಿತಂತೆ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಮತ್ತು ತಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತಾಲ್ಲೂಕಿನ ಯಣ್ಣಂಗೂರಿನ ಯೋಧ ರವಿಕುಮಾರ್, ಸಾಹಿತಿ ವೇಣುಗೋಪಾಲ್, ಚಂದನ ವಾಹಿನಿ ನಿರೂಪಕ ಬಿ.ಎನ್.ಗಿರೀಶ್ ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಅಧ್ಯಕ್ಷತೆಯನ್ನು ಕಪಿಲಮ್ಮ ಕಾಲೇಜಿನ ಸಂಸ್ಥಾಪಕ ಎನ್.ಆರ್.ಕೃಷ್ಣಮೂರ್ತಿ ವಹಿಸುವರು. ಭಾರತೀಯ ಸೈನ್ಯ ಹಾಗೂ ಭಾರತೀಯತೆಯ ಈ ಕಾರ್ಯಕ್ರಮದಲ್ಲಿ ಎಲ್ಲಾ ದೇಶಪ್ರೇಮಿಗಳು ಭಾಗವಹಿಸಬೇಕೆಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಕೋರಿದ್ದಾರೆ.
- Advertisement -
- Advertisement -
- Advertisement -
- Advertisement -