18.1 C
Sidlaghatta
Wednesday, January 15, 2025

ವಾಸ್ತುಶಾಸ್ತ್ರದ ವೈಜ್ಞಾನಿಕ ಆಯಾಮ

- Advertisement -
- Advertisement -

ಆಯಾದಿ

ಭಾರತದಲ್ಲಿ ಗೃಹ/ವ್ಯಾವಹಾರಿಕ ಕಟ್ಟಡಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರ ಪ್ರಾಮುಖ ಪಾತ್ರ ವಹಿಸುತ್ತದೆ. ವಾಸ್ತುವಿನಿಂದ ಕೂಡಿದ ಮನೆಗಳಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಹಾಗೂ ವಾಸ್ತು ತತ್ವಗಳ ಆಧಾರದ ಮೇಲೆ ನಿರ್ಮಿಸಲಾದ ಕಚೇರಿಗಳು, ಮಾಲ್‌ಗಳು, ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಮಾರಾಟದಲ್ಲಿ ಮತ್ತು ಉತ್ಪಾದಕತೆಯಲ್ಲಿ ಉತ್ತೇಜನವನ್ನು ಕಾಣಬಹುದು.

ಕಟ್ಟಡ ನಿರ್ಮಾಣಕ್ಕಾಗಿ ನಿವೇಶನದ ಆಯ್ಕೆಯ ನಂತರ, ವಾಸ್ತು ತತ್ವಗಳು ಮತ್ತು ಸಲಹೆಗಳನ್ನು ಕಟ್ಟಡದ ವಿನ್ಯಾಸಕ್ಕೆ ಅಳವಡಿಸುವುದು ಸೂಕ್ತ. ಇದು ಸರಿಯಾದ ಅಳತೆ – ಅನುಪಾತಗಳೊಂದಿಗೆ ಕೂಡಿದ ಸುಂದರವಾದ ಕಟ್ಟಡವನ್ನು ಖಚಿತಪಡಿಸುತ್ತದೆ. ವಾಸ್ತು ಶಾಸ್ತ್ರದ ‘ಆಯಾದಿ’ ತತ್ವವು ಕಟ್ಟಡವನ್ನು ನಿಖರವಾದ ಆಯಾಮಗಳೊಂದಿಗೆ (ಉದ್ದ, ಅಗಲ ಮತ್ತು ಎತ್ತರ) ನಿರ್ಮಿಸಲು 6 ಸೂತ್ರಗಳನ್ನು ಸೂಚಿಸುತ್ತದೆ.

‘ಆಯಾದಿ’ ಎಂದರೇನು?

ವಾಸ್ತು ಶಾಸ್ತ್ರದ 5 ತತ್ವಗಳಲ್ಲಿ ‘ಆಯಾದಿ’ ಒಂದಾಗಿದೆ, ಇದು ಸರಿಯಾದ ಅಳತೆಗಳೊಂದಿಗೆ ಸೂಕ್ತ ಅನುಪಾತದ ಸುಂದರ ಕಟ್ಟಡಗಳನ್ನು ಯೋಜಿಸಲು ಮತ್ತು ವಿನ್ಯಾಸಗೊಳಿಸಲು ಮಾರ್ಗದರ್ಶಿಯಾಗಿದೆ. ವಾಸ್ತುಶಾಸ್ತ್ರವು ವಿಜ್ಞಾನವಾಗಿದ್ದು, ತರ್ಕ ಹಾಗೂ ತಾರ್ಕಿಕತೆಯ ಆಧಾರದಿಂದ ರೂಪಗೊಂಡಿದೆ.

‘ಆಯಾದಿ’ ಏನನ್ನು ಸೂಚಿಸುತ್ತದೆ?

ವಾಸ್ತು ಶಾಸ್ತ್ರವು ಸ್ಥಳಗಳ ವಿನ್ಯಾಸಕ್ಕಾಗಿ ವಿಜ್ಞಾನದ ಸಾಮಾನ್ಯ ನಿಯಮಗಳನ್ನು ಅನುಸರಿಸುತ್ತಿದ್ದರೂ, ಆಯಾದಿಯು ಕಟ್ಟಡದ ಉದ್ದ, ಅಗಲ, ಪರಿಧಿ, ವಿಸ್ತೀರ್ಣ ಮತ್ತು ಎತ್ತರವನ್ನು ನಿಗದಿಪಡಿಸಲು 6 ನಿರ್ದಿಷ್ಟ ಸೂತ್ರಗಳನ್ನು ಬಳಸಲಾಗುತ್ತದೆ. ಇದರಲ್ಲಿ ಪರಿಗಣಿಸುವ ಕಟ್ಟಡದ ಉದ್ದ ಮತ್ತು ಅಗಲ ಎಂದರೆ ನೆಲದ ಮೇಲೆ ಕಾಣುವ ಅಡಿಪಾಯದ ಹೊರ ಅಳತೆಗಳು. ಕಟ್ಟಡದ ಎತ್ತರವನ್ನು ನೆಲದ ಮೇಲೆ ಕಾಣುವ ಕಟ್ಟಡದ ತಳಭಾಗದಿಂದ ಕಟ್ಟಡದ ಅತ್ಯಂತ ಮೇಲ್ಭಾಗದವರೆಗೆ ಪರಿಗಣಿಸಲಾಗುತ್ತದೆ.

ಇತರ ವಾಸ್ತು ತತ್ವಗಳಂತೆ, ಕಟ್ಟಡದೊಳಗೆ ಧನಾತ್ಮಕ ಪರಿಣಾಮಗಳನ್ನು ಅನುಭವಿಸಲು ಆಯದಿ ಸೂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯವಾಗಿರುತ್ತದೆ. ಇಂದಿಗೂ ಸಹ ‘ಆಯಾದಿ’ ಯು ಭಾರತದ ಹಲವು ಭಾಗಗಳಲ್ಲಿ ಅನುಸರಿಸುವ ವಾಸ್ತುಶಾಸ್ತ್ರದ ಏಕೈಕ ಅಂಶವಾಗಿದೆ.

ಆಯಾದಿ ಸೂತ್ರಗಳು

‘ಆಯಾದಿ’ಯು 6 ಸೂತ್ರಗಳನ್ನು ಹೊಂದಿದೆ

  1. ಆಯ
  2. ವ್ಯವ
  3. ಯೋನಿ
  4. ರಕ್ಷ
  5. ವರ ಹಾಗೂ
  6. ತಿಥಿ

ಈ 6 ಸೂತ್ರಗಳನ್ನು ಬಳಸಿ ಪಡೆದ ಶೇಷವು ಲಾಭ ಅಥವಾ ನಷ್ಟವೇ ಎಂಬುದನ್ನು ನಿರ್ಧರಿಸುತ್ತದೆ. ಅದು ಲಾಭವಾಗಿದ್ದರೆ, ರಚನೆಯು ಪ್ರಮಾಣಾನುಗುಣವಾಗಿ ಮತ್ತು ಸ್ಥಿರವಾಗಿರುತ್ತದೆ ಮತ್ತು ಆಯಾಮಗಳು ಸರಿಯಾಗಿವೆ ಎಂದು ಅರ್ಥ. ಒಂದು ವೇಳೆ ಶೇಷವು (ರಿಮೈಂಡರ್) ನಷ್ಟಕರವಾಗಿದ್ದರೆ, ಆಯಾಮಗಳು ಸರಿಯಾಗಿಲ್ಲ ಮತ್ತು ಸೂಕ್ತವಾಗಿ ಸರಿಪಡಿಸಬೇಕು ಎಂಬುದು ಇದರ ಅರ್ಥವಾಗಿದೆ.

  • ಆಯ = ಉದ್ದ * 8 /12
  • ವ್ಯಯ = ಅಗಲ * 9/10
  • ಯೋನಿ = ಅಗಲ * 3/8
  • ರಕ್ಷಾ = ಉದ್ದ * 8/27
  • ವರ = ಎತ್ತರ * 9/7
  • ತಿಥಿ = ಎತ್ತರ * 9/30

ಆಯಾದಿ ಸೂತ್ರಗಳನ್ನು ಬಳಸಿ ಕಟ್ಟಡದ ಆಯಾಮಗಳ ಪರಿಶೀಲನೆ

ಆಯಾದಿ ಸೂತ್ರಗಳನ್ನು ಬಳಸಿ ಪ್ರಸ್ತಾವಿತ ಕಟ್ಟಡದ ಉದ್ದ, ಅಗಲ ಮತ್ತು ಎತ್ತರವು ಅನುಪಾತದಲ್ಲಿವೆಯೇ ಎಂಬುದನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ಕಟ್ಟಡದ ಉದ್ದ, ಅಗಲ ಅಥವಾ ಎತ್ತರವನ್ನು ಸರಿಪಡಿಸಬಹುದು.

ಉದ್ದ:

ಆಯ, ವ್ಯಾಯ ಮತ್ತು ರಕ್ಷಾ ಸೂತ್ರಗಳನ್ನು ಕಟ್ಟಡ ಅಥವಾ ಕೋಣೆಗಳ ಉದ್ದವನ್ನು ನಿಗದಿಪಡಿಸಲು ಬಳಸಲಾಗುತ್ತದೆ. ಆಯವನ್ನು ‘ಆದಾಯ’ ಎಂದೂ ಕರೆಯುತ್ತಾರೆ, ಆದಾಯ ಎಂದರೆ ಸಂಪಾದನೆ/ಲಾಭ ಮತ್ತು ವ್ಯಯ ಎಂದರೆ ನಷ್ಟ ಅಥವಾ ಖರ್ಚು ಎಂದರ್ಥ. ಆದ್ದರಿಂದ ಆಯ ಯಾವಾಗಲೂ ವ್ಯಾಯಕ್ಕಿಂತಲೂ ಅಧಿಕವಾಗಿರಬೇಕು. ಆಯಾದಿ ಸೂತ್ರಗಳ ಪ್ರಕಾರ ಆಯವು ವ್ಯಾಯಕ್ಕಿಂತ ಹೆಚ್ಚಿರಬೇಕಾದರೆ ಕೊಠಡಿಗಳ ಉದ್ದ ಅಥವಾ ಕಟ್ಟಡದ ಉದ್ದವು ಅಗಲಕ್ಕಿಂತ 1.5 ಪಟ್ಟು ಅಥವಾ ಕನಿಷ್ಠ 1.375 ಪಟ್ಟು ಹೆಚ್ಚಾಗಿ ಇರಬೇಕು. ಇದಕ್ಕಾಗಿಯೇ ನಾವು ಕೊಳ್ಳುವ ನಿವೇಶನಗಳು ಸಾಮಾನ್ಯವಾಗಿ ಚೌಕಾಕಾರವಾಗಿರದೆ ಆಯತಾಕಾರವಾಗಿ 1.375 – 1.5 ಪಟ್ಟು ಉದ್ದವನ್ನು ಹೊಂದಿರುತ್ತವೆ.

ಉದಾ: ನಿವೇಶನಗಳು ಸಾಮಾನ್ಯವಾಗಿ 40×60, 30×40 ಮತ್ತು 50×80 ಆಯಾಮಗಳನ್ನು ಹೊಂದಿರುತ್ತವೆ.

ಅಗಲ:

ಯೋನಿ ಮತ್ತು ವ್ಯಾಯ ಸೂತ್ರಗಳನ್ನು ಕಟ್ಟಡದ ಅಗಲವನ್ನು ಸರಿಪಡಿಸಲು ಬಳಸಲಾಗುತ್ತದೆ. ಯೋನಿ ಸೂತ್ರದಲ್ಲಿ ಪಡೆದಿರುವ ಶೇಷವು ಬೆಸ ಸಂಖ್ಯೆಯಾಗಿದ್ದರೆ ಅದನ್ನು ಧನಾತ್ಮಕ ಹಾಗೂ ಶೇಷವು ಸಮ ಸಂಖ್ಯೆಯಾಗಿದ್ದರೆ ಅದನ್ನು ಋಣಾತ್ಮಕ ಯೋನಿ ಎಂದು ಪರಿಗಣಿಸಲಾಗುತ್ತದೆ. 1, 3, 5 ಮತ್ತು 7 ಅನ್ನು ಉತ್ತಮ ಯೋನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಅವು ಕ್ರಮವಾಗಿ ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳಿಗೆ ಸಂಬಂಧಿಸಿರುತ್ತವೆ. ಆದ್ದರಿಂದ, ಕಟ್ಟಡವು ಅಭಿಮುಖವಾಗಿರುವ ದಿಕ್ಕನ್ನು ಅವಲಂಬಿಸಿ, ಕಟ್ಟಡ ಅಥವಾ ಕೋಣೆಗಳ ಅಗಲವನ್ನು ಸರಿಪಡಿಸಲು ಅನುಗುಣವಾದ ಯೋನಿಯನ್ನು ಬಳಸಲು ಸೂಚಿಸಿದೆ. ಹಾಗೆಯೇ ಮೊದಲ ಮಹಡಿಯ ಯೋನಿಯು ನೆಲ ಅಂತಸ್ತಿನ ಯೋನಿಗನುಗುಣವಾಗಿರಬೇಕು ಮತ್ತು ಹಳೆಯ ಮನೆಯನ್ನು ನವೀಕರಿಸುವಾಗ ಹಳೆಯ ಮನೆಯ ಯೋನಿಯಿಂದ ಭಿನ್ನವಾದ ಹೊಸ ಯೋನಿಯನ್ನು ನವೀಕರಿಸಿದ ಮನೆಗೆ ಬಳಸಬೇಕು.

ಎತ್ತರ:

ವರ ಮತ್ತು ತಿಥಿ ಸೂತ್ರಗಳನ್ನು ಬಳಸಿ ಕಟ್ಟಡದ ಎತ್ತರವನ್ನು ಸರಿಪಡಿಸಬಹುದು. ಮೊದಲ ಮಹಡಿಯ ಎತ್ತರವು ನೆಲ ಮಹಡಿಗಿಂತ ಹೆಚ್ಚಿರಬಾರದು. ಕಟ್ಟಡದ ಸರಿಯಾದ ಎತ್ತರವನ್ನು ನಿರ್ಧರಿಸಲು ಅನುಪಾತಗಳನ್ನು ಸಹ ಪರಿಗಣಿಸಬೇಕಾಗುತ್ತದೆ.

ಅಭಿಮುಖ:

ಅಗಲ ಮಾಪನವನ್ನು ವಿವರಿಸುವ ಯೋನಿ ಸೂತ್ರವು ಪ್ರಧಾನ ದಿಕ್ಕುಗಳಿಗೆ ಆಧಾರಿತವಾಗಿರದ ಕಟ್ಟಡಗಳಿಗೆ ಉಪಯುಕ್ತವಾಗಿದೆ. ವಾಸ್ತು ಶಾಸ್ತ್ರವು ನಾಲ್ಕು ಮುಖ್ಯ ದಿಕ್ಕುಗಳಲ್ಲಿ (ಉತ್ತರ, ಪೂರ್ವ, ದಕ್ಷಿಣ ಮತ್ತು ಪಶ್ಚಿಮ) ಕಟ್ಟಡದ ಅಭಿಮುಖದ ಮಹತ್ವವನ್ನು ಸ್ಪಷ್ಟವಾಗಿ ಒತ್ತಿ ಹೇಳುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಕಟ್ಟಡವನ್ನು ಮಧ್ಯಂತರ ದಿಕ್ಕುಗಳಿಗೆ ಅಭಿಮುಖವಾಗಿ ಕಟ್ಟಬಾರದು. ಆದರೆ ಅಪರೂಪದ ಸಂದರ್ಭಗಳಲ್ಲಿ ನಿವೇಶನವು ಮಧ್ಯಂತರ ದಿಕ್ಕನ್ನು ಎದುರಿಸಿದರೆ 1 ಯೋನಿಯನ್ನು ಕಟ್ಟಡದ ಅಗಲವನ್ನು ಸರಿಪಡಿಸಲು ಬಳಸಬೇಕು.

 

ವಾಸ್ತು, ಗೃಹ-ಕಟ್ಟಡ ನಿರ್ಮಾಣ ಕುರಿತಾದ ಮಾಹಿತಿಗಾಗಿ ಸಂಪರ್ಕಿಸಿ

Santosh Tangade Civil Engineer Planning, Design & Construction

ಸಂತೋಷ್ ತಂಗಡೆ
Engineer – Planning, Design & Construction
8904228687

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!