ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿದವರು ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಹಾಗೂ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡಬಹುದು ಎಂಬುದನ್ನು ಗುಡಿಹಳ್ಳಿ ಗ್ರಾಮದ ಜಿ.ಎನ್.ಕಿರಣ್ ಕುಮಾರ್ ಸಾಬೀತು ಪಡಿಸಿದ್ದಾರೆ. ಇದೀಗ ಅವರು ಸೀಬೆ ಹಣ್ಣಿನ ಕುರಿತಾಗಿ ಸಂಶೋಧನೆಯನ್ನು ನಡೆಸುತ್ತಿದ್ದು, ಅದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ.
ಗುಡಿಹಳ್ಳಿಯ ಟಿ.ನಾರಾಯಣಸ್ವಾಮಿ ಮತ್ತು ಶಾರದಮ್ಮ ದಂಪತಿಯ ಹಿರಿಯ ಮಗನಾದ ಜಿ.ಎನ್.ಕಿರಣ್ ಕುಮಾರ್ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದಿದ್ದು ಗ್ರಾಮದ ಸರ್ಕಾರಿ ಶಾಲೆಯಲ್ಲಿ. ಪ್ರೌಢಶಾಲೆಯನ್ನು ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯಲ್ಲಿ, ಪಿಯುಸಿಯನ್ನು ಯಲಹಂಕದ ಶೇಷಾದ್ರಿಪುರಂ ಕಾಲೇಜಿನಲ್ಲಿ ಪೂರೈಸಿದರು. ಮೈಸೂರು ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಬಿ.ಎಸ್.ಸಿ ಯನ್ನು ಮತ್ತು ಆಂಧ್ರಪ್ರದೇಶದ ಡಾ.ವೈ.ಎಸ್.ಆರ್ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ ಪದವಿ ಪಡೆದಿದ್ದಾರೆ. ಬೆಂಗಳೂರಿನ ಹೆಸರುಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ “ಸೀಬೆ” ಹಣ್ಣಿನ ಕುರಿತಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಪ್ರಸ್ತುತ ಸಾಗರದ ಜಿಲ್ಲಾ ಪಂಚಾಯಿತಿ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
“ನಾನು ಹಳ್ಳಿಯ ವಾತಾವರಣದಲ್ಲಿ ಬೆಳೆದವನು. ಸರ್ಕಾರಿ ಶಾಲೆಯಲ್ಲಿ ಓದಿದವನು. ಅದುವೇ ನನ್ನ ಜೀವನದ ಅಡಿಪಾಯ ಮತ್ತು ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ರೈತ ಕುಟುಂಬದ ಹಿನ್ನೆಯವನಾದ್ದರಿಂದ ನನ್ನ ವಿದ್ಯೆ ಹಾಗೂ ಸಂಶೋಧನೆ ರೈತರಿಗೆ ಉಪಯುಕ್ತವಾಗಬೇಕೆಂಬ ಧ್ಯೇಯದಿಂದ ತೋಟಗಾರಿಕಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವೆ. ಹುಟ್ಟಿದ ಹಳ್ಳಿ, ಜಿಲ್ಲೆಗೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತೇನೆ” ಎಂದು ಜಿ.ಎನ್.ಕಿರಣ್ ಕುಮಾರ್ ತಿಳಿಸಿದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi