ಕನ್ನಡ ರಾಜ್ಯೋತ್ಸವ ಎಂದರೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೇ ನಮ್ಮ ನಾಡು, ನುಡಿ, ಜಲ ರಕ್ಷಣೆಗೆ ನಾವೇನು ಮಾಡಬೇಕು ಎನ್ನುವುದರ ಕುರಿತು ಎಲ್ಲರೂ ಯೋಚಿಸುವ ಕೆಲಸವಾಗಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಕೋಟೆ ವೃತ್ತದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ 61 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ನಗೆಹಬ್ಬ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಮಾತೃಭಾಷೆಯನ್ನು ಹೆಚ್ಚಾಗಿ ಬಳಸುವುದು ಸೇರಿದಂತೆ ನಮ್ಮ ಉಡುಗೆ ತೊಡುಗೆಯಲ್ಲಿಯೂ ನಮ್ಮ ಸಂಸ್ಕøತಿಯನ್ನು ಬೆಳಸುವ ಕೆಲಸವನ್ನು ಮಾಡಬೇಕು. ನಾಡು, ನುಡಿ, ಹಾಗು ನಮ್ಮ ಭಾಗದಲ್ಲಿರುವ ನೀರಿನ ಸಮಸ್ಯೆಗೆ ಪರಿಹಾರ ಸಿಗಬೇಕಾದರೆ ಕನ್ನಡಿಗರೆಲ್ಲರೂ ಒಗ್ಗಟ್ಟಾಗಬೇಕು ಎಂದರು.
ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡ ತೇರುಗಳ ಮೆರವಣಿಗೆ ಮಾಡಿ ನಗೆಹಬ್ಬ, ರಸಸಂಜೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಿಸುವುದರಿಂದ ರಾಜ್ಯೋತ್ಸವ ಆಚರಣೆಗೆ ಕಳೆ ಬರುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆ, ನಾಡು, ಕಾಪಾಡುವ ಪಣ ತೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಎಂ.ಎಸ್. ನರಸಿಂಹಮೂರ್ತಿ, ಅಸಾದುಲ್ಲಾ ಬೇಗ್, ಬೆಣ್ಣೆ ಬಸವರಾಜ್, ಜೀವನ್ ಸಾಬ್ ರಿಂದ ನಗೆ ಹಬ್ಬ ಆಯೋಜಿಸಲಾಗಿತ್ತು.
ಮಾಜಿ ಜಿ.ಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಸಮಾನ ಮನಸ್ಕರ ವೇಧಿಕೆಯ ಅಧ್ಯಕ್ಷ ಜೆ.ಎಸ್. ವೆಂಕಟಸ್ವಾಮಿ, ಎ.ಎಂ. ತ್ಯಾಗರಾಜ್, ಪುರುಷೋತ್ತಮ್, ಕರವೇ ಅಧ್ಯಕ್ಷ ಶ್ರೀಧರ್, ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಸಿ. ನಂದೀಶ್, ರೈತ ಸಂಘದ ತಾಲೂಕು ಅಧ್ಯಕ್ಷ ರವಿಪ್ರಕಾಶ್, ಅಪ್ಜಲ್ ಪಾಷ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -