ಸೆಪ್ಟೆಂಬರ್ 1 ರ ಹೋರಾಟದ ದಿನದ ಪ್ರಯುಕ್ತ ಸಮಾನ ಮನಸ್ಕರ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಜನಪರ ಹಾಗೂ ಕಾರ್ಮಿಕಪರ ರೈತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಹೋರಾಟ ಮಾಡಬಾರದೆಂದು ಹೇಳಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ತೀರ್ಮಾನವನ್ನು ಕೈಬಿಡಬೇಕು. ಹೋರಾಟಗಾರರ ಮೇಲೆ ಸರ್ಕಾರಗಳು ಹಾಕಿರುವ ಮೊಕದ್ದಮೆಗಳನ್ನು ವಾಪಸ್ಸು ಪಡೆಯಬೇಕು. ಡಾ.ಪರಮಶಿವಯ್ಯನವರ ವರದಿ ಪ್ರಕಾರ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡು ತಕ್ಷಣ ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು. ರೈತರ ಕೃಷಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಮನ್ನಾ ಮಾಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಜಾರಿ ಮಾಡಬೇಕು. ದ್ರಾಕ್ಷಿ, ಕೆಂಪು ಈರುಳ್ಳಿ ಮುಂತಾದ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಚೀನಾ ರೇಷ್ಮೆ ಆಮದು ಸುಂಕವನ್ನು ಹೆಚ್ಚಿಸಬೇಕು. ಹಾಲಿನ ಬೆಲೆ ಹೆಚ್ಚಿಸಬೇಕು. ವಿದ್ಯುತ್ ಸಮಸ್ಯೆ ಸರಿಪಡಿಸಬೇಕು ಮುಂತಾದ ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೆದಾರರಿಗೆ ನೀಡಿದರು.
ಸಿ.ಪಿ.ಎಂ. ಮುಖಂಡ ಕೆ.ಎಂ.ವೆಂಕಟೇಶ್, ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ಉಪಾಧ್ಯಕ್ಷ ಜಿ.ಎಸ್.ಅಕ್ರಂಪಾಷ, ಜಗದೀಶ್ಬಾಬು, ಪುರುಷೋತ್ತಮ್, ಮುನೀಂದ್ರ, ರವಿಪ್ರಕಾಶ್, ಪ್ರಕಾಶ್, ಅಸಾದ್, ಇಮ್ತಿಯಾಜ್ಪಾಷ, ಶಫೀವುಲ್ಲಾ, ಮುರಳಿ, ಮಾರಪ್ಪ, ದೇವರಾಜ್, ವೆಂಕಟಾಚಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -