ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬಿ.ಪಿ, ಶುಗರ್ ಪರೀಕ್ಷೆ ಮಾಡುವ ವಿಧಾನವನ್ನು ತಿಳಿಸಿ ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಮೇಶ್ ಮಾತನಾಡಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಾರಕ್ಕೊಮ್ಮೆ ಸರದಿಯಂತೆ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆಯನ್ನು ನಡೆಸಬೇಕು ಎಂದು ಅವರು ತಿಳಿಸಿದರು.
ತಮ್ಮ ದೈನಂದಿನ ಕಷ್ಟ ಕಾರ್ಪಣ್ಯಗಳ ನಡುವೆ ಗ್ರಾಮೀಣ ಜನತೆ ಆರೋಗ್ಯದ ಕಡೆ ಗಮನ ನೀಡುವುದು ಕಡಿಮೆ. ಹಾಗಾಗಿ ಬಿಪಿ, ಶುಗರ್ ಪರೀಕ್ಷೆಗಾಗಿ ಹಳ್ಳಿಗಳಿಗೇ ಆರೋಗ್ಯ ಅಭಿಯಾನ ಹೊರಟಿದೆ. ಅದನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಯಶಸ್ವಿಯಾಗಿ ನಡೆಸಬೇಕಿದೆ.
ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಸಂಸ್ಥೆ ಗ್ರಾಮೀಣ ಜನರ ಆರೋಗ್ಯ ಸ್ಥಿತಿಗತಿ ಕುರಿತು ಈಚೆಗೆ ಅಧ್ಯಯನ ನಡೆಸಿ ಹಳ್ಳಿಗಳಲ್ಲೂ ಬಿಪಿ ಮತ್ತು ಮಧುಮೇಹ ಕಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಗ್ರಾಮೀಣ ಜನತೆಗೆ ಈ ಬಗ್ಗೆ ನಿರ್ಲಕ್ಷ್ಯವಿದೆ ಎಂದು ವರದಿ ಪ್ರಸ್ತಾಪಿಸಿತ್ತು. ಈ ವರದಿ ಆಧರಿಸಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲೇ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. 30 ವರ್ಷ ದಾಟಿದ ಎಲ್ಲರಿಗೂ ಉಚಿತವಾಗಿ ಬಿಪಿ, ಮಧುಮೇಹ ಪರೀಕ್ಷಿಸಲಾಗುತ್ತದೆ ಎಂದರು.
ಪರೀಕ್ಷೆ ಕುರಿತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಹಳ್ಳಿಯ ಮನೆಮನೆಗೆ ಹೋಗಿ ವಿಷಯ ಮುಟ್ಟಿಸಬೇಕು. ಅತ್ಯಾಧುನಿಕ ಸರಳ ಯಂತ್ರವು ಸ್ಟ್ರಿಪ್ ಮಾದರಿಯಲ್ಲಿ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಪರೀಕ್ಷಿಸುತ್ತದೆ. ಮಾಮೂಲಿ ವಿಧಾನದ ಮೂಲಕ ಬಿಪಿ ಪರೀಕ್ಷೆಯನ್ನೂ ಮಾಡುತ್ತಾರೆ. ಪರೀಕ್ಷೆಯಿಂದ ಸಮಸ್ಯೆ ಕಂಡುಬಂದರೆ ಆ ವ್ಯಕ್ತಿಗೆ ತಿಳಿಸಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಯಾವುದಾದರೂ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು. ಕೆಲಸದ ಒತ್ತಡದಲ್ಲಿ ಆರೋಗ್ಯ ಪರೀಕ್ಷೆಗೆ ಹೋಗದ, ಹಣದ ಸಮಸ್ಯೆಯಿಂದ ಹಿಂಜರಿಯುತ್ತಿದ್ದ ಹಾಗೂ ನಿರ್ಲಕ್ಷ್ಯದಲ್ಲಿದ್ದ ಗ್ರಾಮೀಣ ಜನರಿಗೆ ಈ ವ್ಯವಸ್ಥೆ ವರದಾನವಾಗಿದೆ ಎಂದು ಹೇಳಿದರು.
ಆರೋಗ್ಯ ಸಹಾಯಕಿ ಭಾಗ್ಯಲಕ್ಷ್ಮಿ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು