Sidlaghatta : ಶಿಡ್ಲಘಟ್ಟ ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಿವೈಎಸ್ಪಿ ಕೆ.ಎನ್.ರಮೇಶ್ ಅವರು ಮಾತನಾಡಿದರು.
ಶಿಸ್ತು, ಸಂಯಮ, ಸ್ಪಷ್ಟವಾದ ಗುರಿ, ಉತ್ತಮ ಗುರು ಇದ್ದಲ್ಲಿ ಮಾತ್ರ ನಿಶ್ಚಿತ ವಾಗಿ ವ್ಯಕ್ತಿಯ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.
ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯೆ ಸಾಧಕರ ಸ್ವತ್ತು. ಶ್ರದ್ಧೆ ಶಿಸ್ತು ಸಮಯಪರಿಪಾಲನೆ ಇದ್ದರೆ ಜ್ಞಾನ ಒಲಿದು ಬರಲಿದೆ. ಶಾಲೆಯಲ್ಲಿ ಪಾಠ ಮಾಡುವಾಗ ಏಕಾಗ್ರತೆಯಿಂದ ಇದ್ದಲ್ಲಿ ಕೇಳಿದ ಪಾಠ ಮನಸ್ಸಿಗೆ ಮುಟ್ಟುತ್ತದೆ, ತೌತ್ತದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ತಮ್ಮ ಗಮನವನ್ನ ಬೇರಡೆಗೆ ಹರಿಸದೆ ವಿದ್ಯಾರ್ಜನೆಯಲ್ಲಿ ತೊಡಗಬೇಕು. ಉತ್ತಮ ಸಂಸ್ಕಾರ ಸಂಸ್ಕೃತಿಗಳ ನ್ನು ಕಲಿಸುವ ಶಾಲೆಯಲ್ಲಿ ಅಭ್ಯಾಸ ಮಾಡುವುದರಿಂದ ದೇಶಕ್ಕೆ ಉತ್ತಮ ದರ್ಜೆಯ ಪ್ರಜೆಗಳು ಲಭ್ಯ. ಮೌಲ್ಯಾಧಾರಿತ ಶಿಕ್ಷಣ ದಿಂದ ಮಾತ್ರ ದೇಶದ ಅಭಿವೃದ್ಧಿ ಹೊಂದಲು ಸಾಧ್ಯ. ಇಂದಿನ ತಲೆಮಾರಿನ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅನೇಕ ಅವಕಾಶಗಳಿದ್ದು ಅವುಗಳ ಸದುಪಯೋಗ ಪಡೆಯಬೇಕು. ಗುರು ಹಿರಿಯರಲ್ಲಿ ಗೌರವ ಭಾವನೆ ತೋರಿಸಿದಲ್ಲಿ ಮಾತ್ರ ನಿಮ್ಮ ವಿದ್ಯಾರ್ಥಿ ಜೀವನದ ಸಾರ್ಥಕತೆ ಕಾಣುತ್ತದೆ ಎಂದರು.
ಇಂದಿನ ವಿದ್ಯುನ್ಮಾನಗಳಿಂದ ದೂರವಿದ್ದಲ್ಲಿ ಮಾತ್ರ ನಿಮ್ಮಲ್ಲಿ ನೆನಪಿನ ಶಕ್ತಿ ಹೆಚ್ಚಾಗಲು ಸಾಧ್ಯ,ಎಂದರು.
ರಾಜ್ಯ ಮಟ್ಟದ ಸ್ಪರ್ಧೆ ಗಳಲ್ಲಿ ವಿಜೇತ ರಾದ ವಿದ್ಯಾರ್ಥಿ ಗಳಿಗೆ ಪದಕ ಗಳನ್ನು ವಿತರಿಸಿ ಸನ್ಮಾನಿಸಲಾಯಿತು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎ.ಕೃಷ್ಣಯ್ಯಶೆಟ್ಟಿ, ಕಾರ್ಯದರ್ಶಿ ರೂಪಸಿರಮೇಶ್, ಸರ್ಕಲ್ ಇನ್ಸ್ ಪೆಕ್ಟರ್ ರಘು, ಶಿಕ್ಷಕಿ ನೇತ್ರಾವತಿ, ಶಿವಕುಮಾರ್, ರವಿ, ಯುವಜನ ಸಂಘದ ಕೇದಾರನಾಥ, ಮಹಿಳಾ ಮಂಡಳಿಯ ಅಧ್ಯಕ್ಷೆ ಗಜಲಕ್ಷ್ಮಿ,ಮಹಾ ಸಭಾ ನಿರ್ದೇಶಕಿ ಭಾರತಿ ರಾಜೇಶ್, ಪ್ರಸಾದ್ ಬಾಬು, ಮಹೇಶ್ ಹಾಜರಿದ್ದರು.