ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ವಯೋನಿವೃತ್ತಿಯನ್ನು ಹೊಂದಿದ ನಾಲ್ವರು ಮುಖ್ಯಶಿಕ್ಷಕರನ್ನು ಸನ್ಮಾನಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ನಿವೃತ್ತರಾದ ಮುಖ್ಯಶಿಕ್ಷಕರು ವೃತ್ತಿನಿರತ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ಕೊಡಿ ಎಂದು ಅವರು ತಿಳಿಸಿದರು.
ನಿವೃತ್ತರು ಮನಸ್ಸನ್ನು ಚಟುವಟಿಕೆಯಿಂದ ಇಟ್ಟುಕೊಳ್ಳುವುದರ ಜೊತೆಗೆ ಆರೋಗ್ಯದ ಬಗ್ಗೆ ಕೂಡ ಕಾಳಜಿ ವಹಿಸಬೇಕು ಎಂದು ಹೇಳಿದರು.
ಪ್ರಾಥಮಿಕ ಶಾಲಾ ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮನ್ನಾರ್ ಸ್ವಾಮಿ ಮಾತನಾಡಿ, ನಿವೃತ್ತರಾದ ಮುಖ್ಯಶಿಕ್ಷಕರ ಅನುಭವ ಬಹಳ ಅಮೂಲ್ಯ ಮತ್ತು ಅಸಾಧಾರಣ. ಇದರ ಉಪಯೋಗ ಶಿಕ್ಷಣ ಇಲಾಖೆಗೆ ಅತ್ಯಗತ್ಯ ಎಂದು ನುಡಿದರು.
ವಯೋನಿವೃತ್ತಿಯನ್ನು ಹೊಂದಿದ ಮುಖ್ಯಶಿಕ್ಷಕರಾದ ವಿ.ಎನ್.ಗೋಪಾಲಕೃಷ್ಣ, ಕೃಷ್ಣಮೂರ್ತಿ, ಮೇರಿ ಅನ್ನಪೂರ್ಣ ಮತ್ತು ನಾಗವೇಣಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಸನ್ಮಾನಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಶಿಕ್ಷಕರಾದ ರಮೇಶ್, ಲಕ್ಷ್ಮಿನರಸಪ್ಪ, ಗಜೇಂದ್ರ, ಗೀತಮ್ಮ, ಶ್ರೀನಿವಾಸ್, ದೇವರಾಜ್, ಶಕುಂತಲಮ್ಮ, ಎಲ್.ನಾಗಭೂಷಣ್, ಎಂ.ಎ.ರಾಮಕೃಷ್ಣಪ್ಪ, ಗಂಗಶಿವಪ್ಪ, ಮಂಜುನಾಥರೆಡ್ಡಿ ಹಾಜರಿದ್ದರು.