Tummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನುಳಿದ 11 ಮಂದಿ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.
ಜೆಡಿಎಸ್ ಬೆಂಬಲಿತ 11 ಮಂದಿ ನಿರ್ದೇಶಕರು ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ತುಮ್ಮನಹಳ್ಳಿ ಡೇರಿಯ ಆಡಳಿತ ಮಂಡಳಿಯು ಜೆಡಿಎಸ್ ಪಾಲಾಗಿದೆ.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮುನಿತಿರುಮಳಪ್ಪ ಅವಿರೋಧ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಸಾಮಾನ್ಯ ಕ್ಷೇತ್ರದಿಂದ ಕೃಷ್ಣಪ್ಪ, ಕೇಶವಮೂರ್ತಿ.ಟಿ.ಎನ್, ಚಿಕ್ಕವೆಂಕಟಸ್ವಾಮಿ.ಟಿ.ಎಲ್, ಶ್ರೀನಿವಾಸ್.ಟಿ.ಎನ್, ಸುರೇಶ್.ಟಿ.ವಿ, ಮುನಿಕೃಷ್ಣಪ್ಪ.ಟಿ.ಎಂ, ಮುರುಳಿ.ಟಿ.ಕೆ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಟಿ.ಎಂ.ನಾರಾಯಣಸ್ವಾಮಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ನಾರಾಯಣಸ್ವಾಮಿ.ಟಿ.ಎಚ್, ಮಹಿಳಾ ಮೀಸಲು ಕ್ಷೇತ್ರದಿಂದ ಶೋಭಾ, ರತ್ನಮ್ಮ ಅವರು ಚುನಾವಣೆ ಎದುರಿಸಿ ವಿಜಯ ಸಾಧಿಸಿದ್ದಾರೆ.
ಗ್ರಾಮದ ಜೆಡಿಎಸ್ ಮುಖಂಡ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಂ.ಸುರೇಂದ್ರ ಮಾತನಾಡಿ, ಕ್ಷೇತ್ರದ ಜನಪ್ರಿಯ ಶಾಸಕ ಬಿ.ಎನ್.ರವಿಕುಮಾರ್ ನಾಯಕತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ 11 ಸ್ಥಾನಕ್ಕೆ 11 ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ. ಕಳೆದ ಹಲವಾರು ವರ್ಷಗಳಿಂದ ಗ್ರಾಮದ ಡೇರಿಗೆ ಚುನಾವಣೆ ನಡೆದಿರಲಿಲ್ಲ. ಇದೀಗ ಡೇರಿ ಚುನಾವಣೆಯ ಸಂಬಂಧ ಗ್ರಾಮದ ಹಲವರು ಜೈಲುವಾಸ ಕಂಡಂತಾಯಿತು. ಆದರೂ ಯಾವುದಕ್ಕೂ ಅಂಜದೇ ಮುಂದಿನ ದಿನಗಳಲ್ಲಿ ಡೇರಿ ಅಭಿವೃದ್ದಿಗೆ ಶ್ರಮಿಸುವಂತೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಸೂಚಿಸಿ ಅಭನಂದಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಹುಜಗೂರು ರಾಮಯ್ಯ, ಗೊರಮಡುಗು ರಾಮಾಂಜಿನಪ್ಪ, ಕೊತ್ತನೂರು ಲಕ್ಷ್ಮೀಪತಿ, ಮುನಿರಾಜಪ್ಪ, ಲಕ್ಷ್ಮಿನಾರಾಯಣಪ್ಪ, ಸೊರಕಾಯಲಹಳ್ಳಿ ಸುರೇಶ್, ಟಿ.ಎಸ್.ನಾರಾಯಣಸ್ವಾಮಿ, ಸಿ.ಎನ್.ಗಜೇಂದ್ರ, ಸಿ.ಎನ್.ಮಂಜುನಾಥರೆಡ್ಡಿ ಹಾಗೂ ವಿಜೇತ ಎಲ್ಲ ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳು ಹಾಜರಿದ್ದರು.