Sidlaghatta : ಮನೆ ಮುಂಭಾಗ ನಿಲ್ಲಿಸಿದ್ದ ಟ್ರಾಕ್ಟರ್ ಟ್ರಾಲಿ ಕಳುವಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸುಮಾರು 8 ಲಕ್ಷ ಬೆಲೆ ಬಾಳುವ 6 ಟ್ರಾಕ್ಟರ್ ಟ್ರಾಲಿಗಳು, 1 ಸೊನಾಲಿಕಾ ಟ್ರಾಕ್ಟರ್ ಇಂಜಿನ್ ಸೇರಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ದರ್ಶನ್ ಎನ್ನಲಾಗಿದೆ.
ಇದೇ ಜೂನ್ 10 ರಂದು ತಾಲ್ಲೂಕಿನ ತಲದುಮ್ಮನಹಳ್ಳಿ ಪ್ರಭಾಕರ್ ಎಂಬುವವರು ತಮಗೆ ಸೇರಿದ ಟ್ರಾಕ್ಟರ್ ಟ್ರಾಲಿ ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಬಗ್ಗೆ ಸರ್ಕಲ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತೃತ್ವದಲ್ಲಿ ಪಿಎಸ್ಸೈ ಸುನಿಲ್‌ಕುಮಾರ್ ಜಿ.ಕೆ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಆರೋಪಿ ದರ್ಶನ್ ಮತ್ತು ಕಳುವಾಗಿದ್ದ ಟ್ರಾಲಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.