Y Hunasenahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೈ. ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಿಡಿಲು (Thunderbolt) ಬಡಿದು 4 ಕುರಿಗಳು, ಒಂದು ಎಮ್ಮೆ, 10 ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದು (Livestock Death), 8 ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿದೆ.
ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಚಿಕ್ಕಕದಿರಪ್ಪ ಎಂಬುವರಿಗೆ ಸೇರಿದ ದನಗಳು ತಂಗುತ್ತಿದ್ದ ಗುಡಿಸಲಿಗೆ ಸಿಡಿಲು ಬಡಿದು, ಹೊತ್ತಿ ಉರಿದಿದೆ. ಗುಡಿಸಿಲಿನಲ್ಲಿ ಇದ್ದ ಕುರಿ, ಎಮ್ಮೆ, ಕೋಳಿಗಳು ಸಾವನ್ನಪ್ಪಿದ್ದು ಸುಟ್ಟು ಕರಕಲಾಗಿವೆ. 30 ಕುರಿಗಳಲ್ಲಿ 4 ಕುರಿಗಳು, ಒಂದು ಎಮ್ಮೆ ಮೃತಪಟ್ಟಿದ್ದು, 8 ಕ್ಕೂ ಹೆಚ್ಚು ಕುರಿಗಳಿಗೆ ಗಾಯಗಳಾಗಿವೆ. ಅಲ್ಲದೆ 10 ಕೋಳಿಗಳು ಬೆಂಕಿಯಲ್ಲಿ ಸಜೀವವಾಗಿ ದಹನವಾಗಿವೆ.
ತಾಲ್ಲೂಕಿನಲ್ಲಿ ಕಳೆದ 5 ದಿನಗಳಿಂದ ರಾತ್ರಿ ವೇಳೆ ಗುಡುಗು, ಸಿಡಿಲು ಸಹಿತ ಬಾರೀ ಮಳೆಯಾಗಿತ್ತಿದ್ದು. ಪ್ರಕೃತಿಯ ವಿಕೋಪದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡಿರುವ, ಎಮ್ಮೆ, ಕುರಿಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ಚಿಕ್ಕಕದಿರಪ್ಪ ಕುಟುಂಬ, ಕುರಿಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದೆ. ಹಾನಿಯಾದ ಕುರಿಗಳಿಗೆ ಸರ್ಕಾರ ಪರಿಹಾರ ನೀಡುವಂತೆ ಕುಟುಂಬ ಮನವಿ ಮಾಡಿದೆ.
ವೈ. ಹುಣಸೆಹಳ್ಳಿ ಪಶು ಚಿಕಿತ್ಸಾಲಯದ ಡಾ.ಮಂಜೇಶ್ ಬೇಟಿ ನೀಡಿ, ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಕಂದಾಯ ನಿರೀಕ್ಷಕರು ಭೇಟಿ ಪರಿಶೀಲನೆ ನಡೆಸಿದ್ದಾರೆ.