Sidlaghatta : ಶಿಡ್ಲಘಟ್ಟ ವಿಧಾನಸಭೆ ಚುನಾವಣೆಗೆ ಬುಧವಾರ ಮೂರು ಮಂದಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಚುನಾವಣಾಕಾರಿಗಳಿಗೆ ಸಲ್ಲಿಸಿದ್ದಾರೆ.
ಎಸ್.ಎನ್ ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಒಂದು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ನಾಮಪತ್ರದೊಂದಿಗೆ ಪಕ್ಷದ ಬಿ ಫಾರಂ ಸಲ್ಲಿಸಿಲ್ಲ.
ಮಾನವಹಕ್ಕುಗಳ ಕಮಿಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚೀಮನಹಳ್ಳಿಯ ಸಿ.ಎಂ.ಬೈರೇಗೌಡ ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಹಾಗೆಯೆ ನಗರಸಭೆ ಮಾಜಿ ಉಪಾಧ್ಯಕ್ಷ ಎಸ್.ಎ.ಸಯ್ಯದ್‌ಗೌಸ್ ಅಹ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣಾಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು.
ಇನ್ನು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದರಲ್ಲದೆ ಬುಧವಾರ ಸಹ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾಕಾರಿ ಜಾವಿದಾ ವಸೀಮಾ ಖಾನಂ, ಸಹಾಯಕ ಚುನಾವಣಾಕಾರಿಯೂ ಆದ ತಹಶೀಲ್ದಾರ್ ಬಿ.ಎನ್.ಸ್ವಾಮಿ ಹಾಜರಿದ್ದರು.
Three Candidates Submit Nominations for Sidlaghatta Assembly Elections
Sidlaghatta : On Wednesday, three candidates have submitted their nomination papers for the upcoming Sidlaghatta Assembly elections to the Electoral Officer, Javida Wasima Khanam, and Assistant Electoral Officer, Tehsildar BN Swamy.
SN Kriya Trust President Anjinappa (Puttu) has submitted two nomination papers, one as a candidate of the Indian National Congress Party and another as an independent candidate. However, he failed to submit the required Party B form along with his nomination paper.
CM Byre Gowda of Cheemanahalli, the founder of the Human Rights Committee, has filed his nomination as an independent candidate.
Likewise, former vice president of the city council, SA Syed Ghouse, has submitted his nomination papers as an independent candidate.
Meanwhile, BJP candidate SV Ramachandra Gowda had already submitted his nomination paper on Monday, and he resubmitted his nomination paper again on Wednesday.
The elections are heating up, and the people of Sidlaghatta are eagerly waiting to see who will represent them in the upcoming assembly elections.