ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಬೈರಸಂದ್ರ ಗ್ರಾಮದಲ್ಲಿನ ಚನ್ನಕೇಶಸ್ವಾಮಿ ಹಾಗೂ ಮಾರಮ್ಮ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಘೋಷಿಸಿ, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಪ್ರತಿಯೊಂದು ಕುಟುಂಬಕ್ಕೂ ದಿನಸಿ ಕಿಟ್ ವಿತರಣೆ ಮಾಡಿ ಎಬಿಡಿ ಟ್ರಸ್ಟ್ ಅಧ್ಯಕ್ಷ ರಾಜೀವ್‌ಗೌಡ ಮಾತನಾಡಿದರು.
ಕೋವಿಡ್ ಸಂಕಷ್ಟದಿಂದ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಕುಟುಂಬಗಳಿಗೂ ದಿನಸಿ ಕಿಟ್ ವಿತರಿಸುವ ಜೊತೆಗೆ ಕೋವಿಡ್‌ನಿಂದ ಮೃತಪಟ್ಟಂತಹವರ ಕುಟುಂಬಗಳಿಗೆ ಟ್ರಸ್ಟ್ ವತಿಯಿಂದ ತಲಾ ಹತ್ತು ಸಾವಿರ ಆರ್ಥಿಕ ಸಹಾಯ ನೀಡಲಾಗುವುದು ಎಂದು ಅವರು ತಿಳಿಸಿದರು.
ಗ್ರಾಮೀಣ ದೇವಸ್ಥಾನದ ಪುನರುಜ್ಜೀವನಕ್ಕೆ ಕೊರೊನಾ ಸಂಕಷ್ಟದಲ್ಲಿಯೂ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ದೇವರ ಸೇವೆಗೆ ಟ್ರಸ್ಟ್ ವತಿಯಿಂದ ಆಥಿಕ ನೆರವನ್ನು ನೀಡುವುದಾಗಿ ಹೇಳಿದರು.
ವೈದ್ಯಕೀಯ ಸಮಸ್ಯೆ ಇರುವವರು ಟ್ರಸ್ಟ್ ನ ಪದಾಧಿಕಾರಿಗಳನ್ನು ಭೇಟಿ ಮಾಡಿದಲ್ಲಿ ಅಂತಹವರಿಗೆ ಟ್ರಸ್ಟ್ ವತಿಯಿಂದ ಅಗತ್ಯ ಸಹಾಯ ಮಾಡಲಾಗುವದು. ತಾಲ್ಲೂಕಿನ ಜನತೆಯ ಉಪಯೋಗಕ್ಕಾಗಿ ಟ್ರಸ್ಟ್ ವತಿಯಿಂದ ಹತ್ತು ಆಂಬುಲೆನ್ಸ್ ಗಳನ್ನು ಕೊಡುಗೆಯಾಗಿ ನೀಡಲು ಯೋಜನೆ ರೂಪಿಸಿದ್ದು ಆದಷ್ಟು ಬೇಗ ತಾಲ್ಲೂಕಿನ ಜನತೆಗೆ ಆಂಬುಲೆನ್ಸ್ ಸೇವೆ ಕಲ್ಪಿಸಲಾಗುವುದು ಎಂದರು.
ಎಬಿಡಿ ಟ್ರಸ್ಟ್ ಸದಸ್ಯ ಶ್ರೀನಿವಾಸ್ ಬಾಬು, ಚಲನಚಿತ್ರ ನಟ ಧನುಷ್, ಬೈರಸಂದ್ರ ಗ್ರಾಮದ ಮುಖಂಡರಾದ ಶಿವಮೂರ್ತಿ, ನಾರಾಯಣಪ್ಪ, ಪ್ರತಾಪ್, ಗ್ರಾಮ ಪಂಚಾಯಿತಿ ಸದಸ್ಯೆ ಶಶಿಕಲಾ ಅಮರೇಶ್, ಅಂಬರೀಶ್, ಅಪ್ಪಣ್ಣ, ನಾಗರಾಜ್, ಸುರೇಶ್, ಚಂದ್ರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ದೇವರಾಜು, ಪರಮೇಶ್, ನಾಗೇಶ್, ಹರೀಶ್, ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಮುನಿರಾಜು, ಮುನಿರಾಜು ಕುಟ್ಟಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi