ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಶಿವಕುಮಾರ್ ಪುದುಚೆರಿಯ ಯುನಿವರ್ಸಲ್ ಟೀಚರ್ ಅಕಾಡೆಮಿ ಆಯೋಜಿಸಿದ್ದ ಎರಡು ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ
ಪುದುಚೆರಿಯ ಯುನಿವರ್ಸಲ್ ಟೀಚರ್ ಅಕಾಡೆಮಿಯವರು ಹಮ್ಮಿಕೊಂಡಿದ್ದ ಇಂಟರ್ ನ್ಯಾಷನಲ್ ಎಜುಕೇಶನಲ್ ಇ ಕಂಟೆಂಟ್ ಫೆಸ್ಟಿವಲ್-2020 ನಲ್ಲಿ ಶಿಕ್ಷಕರಿಗಾಗಿ 4 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕ ಶಿವಕುಮಾರ್ ಅವರು ಬೆಸ್ಟ್ ಎಜುಕೇಷನಲ್ ವೀಡಿಯೊ ಗ್ಲೋಬಲ್ ಅವಾರ್ಡ್ ಮತ್ತು ಬೆಸ್ಟ್ ಎಜುಕೇಷನಲ್ ಪೋಸ್ಟರ್ ಗ್ಲೋಬಲ್ ಅವಾರ್ಡ್ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ಈ ಸ್ಪರ್ಧೆಯಲ್ಲಿ 958 ಜನರು ಭಾಗವಹಿಸಿದ್ದರು, ಪ್ರಶಸ್ತಿ ಪ್ರದಾನವನ್ನು ವರ್ಚುವಲ್ ಪ್ಲಾಟ್ ಫಾರಂ ಜೂಮ್ ನ ಮೂಲಕ ಭಾನುವಾರ ನಡೆಸಲಾಯಿತು.
ಅಂತರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಡಯಟ್ ನ ಪ್ರಾಂಶುಪಾಲ ರಘುನಾಥ ರೆಡ್ಡಿ, ಹಾಗೂ ಡಯಟ್ ನ ಉಪನ್ಯಾಸಕರುಗಳಾದ ಪ್ರವೀಣ್, ಕಾಮಾಕ್ಷಮ್ಮ, ಆನಂದ್ ರವರುಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕ ಎಸ್ ಶಿವಶಂಕರ್ ಅಭಿನಂದಿಸಿದ್ದಾರೆ.