ನಗರದ ತಾಲ್ಲೂಕು ಕಚೇರಿಯಲ್ಲಿರುವ ಭೂಮಾಪಕರ ಶಾಖೆಯಲ್ಲಿ ಭೂ ಮಾಪಕರ ದಿನವನ್ನು ಆಚರಿಸಲಾಯಿತು
ಕಾರ್ಯಕ್ರಮದಲ್ಲಿ ಭಾಗಿಯಾದ ಭೂ ಮಾಪಕರ ಶಾಖೆಯ ಸೂಪರ್ ವೈಸರ್ ಸೋಮಶೇಖರಪ್ಪ ಅವರು ಮಾತನಾಡಿ, ಭಾರತದಲ್ಲಿ ಪ್ರಥಮ ಬಾರಿಗೆ ಆಧುನಿಕ ಉಪಕರಣಗಳನ್ನು ಬಳಸಿ ವೈಜ್ಞಾನಿಕ ರೀತಿಯಲ್ಲಿ ಕರ್ನಲ್ ವಿಲಿಯಂ ಲ್ಯಾಂಬ್ ಟನ್ ಎಂಬ ಸೇನಾಧಿಕಾರಿಯ ನೇತೃತ್ವದಲ್ಲಿ 1802 ರಲ್ಲಿ ಭೂ ಸರ್ವೆ ಕಾರ್ಯ ನಡೆಯಿತು. ಅದರ ಜ್ಞಾಪಕಾರ್ಥವಾಗಿ ಪ್ರತಿ ವರ್ಷವೂ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವೈಜ್ಞಾನಿಕ ಪದ್ಧತಿಯಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಭೂಮಾಪನಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಹಲವು ಸಮಸ್ಯೆಗಳ ನಡುವೆಯೂ ಭೂಮಾಪಕರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ದಿನಾಚರಣೆಯಲ್ಲಿ ಭೂಮಾಪಕರುಗಳಾದ ನಾಗಭೂಷಣರೆಡ್ಡಿ, ಗುರುಸ್ವಾಮಿ, ರವೀಂದ್ರ, ಆದರ್ಶ, ಲಕ್ಷ್ಮೀ ನರಸಿಂಹಯ್ಯ, ಸತೀಶ್, ರಾಜಮ್ಮ, ನಂದಿನಿ, ಗುರುಪ್ರಸಾದ್ ಹಾಜರಿದ್ದರು.