Sidlaghatta : ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಸೂಕ್ತ ತರಬೇತಿ ಅವಶ್ಯಕತೆ ಇದೆ. ವಿದ್ಯಾರ್ಥಿ ಗಳು ಕೇವಲ ಪಠ್ಯ ಕ್ಕೆ ಅಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡಾಗ ಮಾತ್ರ ನಿಮ್ಮ ಲ್ಲಿನ ಪ್ರತಿಭೆ ಹೊರಹೊಮ್ಮಲು ಅವಕಾಶ ಸಿಗುತ್ತದೆ ಎಂದು ವಾಸವಿ ವಿದ್ಯಾಸಂಸ್ಥೆ ಯ ಆಡಳಿತ ಅಧಿಕಾರಿ ಎಸ್ ರಮೇಶ್ ಬಾಬು ತಿಳಿಸಿದರು.
ಶಿಡ್ಲಘಟ್ಟ ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆ ಯ ಆವರಣದಲ್ಲಿ ಬುಧವಾರ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಯ ವತಿಯಿಂದ 10 ರಿಂದ 16 ವರ್ಷಗಳ ಮಕ್ಕಳಿಗೆ ಏರ್ಪಡಿಸಿರುವ ವಸಂತ ಬೇಸಿಗೆ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಸೂಕ್ತ ರೀತಿಯಲ್ಲಿ ಅರಿವು ಮೂಡಿಸ ಬೇಕಾಗಿದೆ. ವಿದ್ಯಾರ್ಥಿ ಗಳಿಗೆ ಸಂಸ್ಕಾರಯುತ ವ್ಯಕ್ತಿತ್ವ ನಿರ್ಮಾಣ ಕ್ಕೆ ಇಂತಹ ಶಿಬಿರಗಳು ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಯ ಸಂಚಾಲಕ ಸುಂದರಾಚಾರಿ ಮಾತನಾಡಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಮಕ್ಕಳಿಗೆ ನಮ್ಮ ಧರ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುತ್ತದೆ. ಶಿಸ್ತು ,ಸಮಯ ಪ್ರಜ್ಞೆ, ನಾಯಕತ್ವದ ತರಬೇತಿ, ಅಗ್ನಿ ಹೋತ್ರದ ಬಗ್ಗೆ ಹಾಗೂ ಇತರೆ ಹೋಮ ಹವನ ಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ, ಜಾನಪದ ಕಲೆಗಳ ಕಲಿಕೆ ಮುಂತಾದ ಹತ್ತು ಹಲವು ವಿಷಯಗಳ ಬಗ್ಗೆ ಅರಿವು ಮೂಡಿಸಲು ಶಿಬಿರವನ್ನು ಆಯೋಜಿಸಲಾಗಿದೆ. ಇದರ ಸದುಪಯೋಗ ಪಡೆಯುವಂತೆ ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಯ ಶುಭಾ ಶಿವಶಂಕರ್ ಮಾತನಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು, ಗುರು ಹಿರಿಯ ಬಗ್ಗೆ ಗೌರವ ಗಳ ಬಗ್ಗೆ ತಿಳಿಸುವ, ಭಜನೆ , ಧ್ಯಾನ, ಮುಂತಾದ ಸದ್ವಿಚಾರಗಳನ್ನೊಳಗೊಂಡ ಹದಿನೈದು ದಿನಗಳ ಶಿಬಿರ ಸಂಪೂರ್ಣ ಉಚಿತ ವಾಗಿದ್ದು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ನ್ನು ಶಿಬಿರಕ್ಕೆ ಕರೆ ತರಬೇಕೆಂದು ಹೇಳಿದರು. ನೂರಕ್ಕೂ ಹೆಚ್ಚಿನ ಮಕ್ಕಳು ಶಿಬಿರದ ಲ್ಲಿ ಪಾಲ್ಗೊಂಡಿದ್ದರು.
Spring-Summer Camp Organized by Sri Patanjali Yoga Shikshana Samsthe
Sidlaghatta : The importance of appropriate training for the personality development of students was highlighted by S Ramesh Babu, the Administrative Officer of Vasavi Vidya Samsthe. He emphasized that students should not be limited to just their academic courses but should also participate in extra-curricular activities, as it provides an opportunity for their talent to emerge.
Babu made these remarks while inaugurating the spring-summer camp organized by Sri Patanjali Yoga Shikshana Samsthe for children between the ages of 10 and 16. The camp was held in the premises of Sri Vasavi Vidya Samsthe in Sidlaghatta city.
Babu further added that today’s children need to be made aware of our ritual culture in an appropriate manner, and these camps provide an excellent opportunity for students to build a cultured personality. The convener of Patanjali Yoga Education Institute, Sundarachari, emphasized that the institute aims to make children aware of our religion and culture through this camp.
The fortnight-long camp focused on ten different topics, including discipline, time consciousness, leadership training, scientific analysis of Agni Hotra and other Homa Havans, and learning of folk arts. Sundarachari urged parents to take advantage of this free camp to increase their children’s confidence, as it includes good practices like bhajan and meditation.
Shubha Shivshankar of Patanjali Yoga Education Institute encouraged parents to bring a large number of children to the camp, which was attended by more than a hundred children.