ನಗರದ ರಹಮತ್ ನಗರದಲ್ಲಿ ಸೂಫಿ ಸಂತರ 809 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು) ಮಾತನಾಡಿದರು.
ಭಾರತ ದೇಶ ಸೂಫಿ ಸಂತರು, ಶರಣರ ಬೀಡಾಗಿದೆ. ಹಲವು ಶತಮಾನಗಳಿಂದಲೂ ಅವರ ತತ್ವಗಳ ಮಾರ್ಗದಲ್ಲೇ ಸೌಹಾರ್ದತೆ ನೆಲೆಸಿದೆ. ಋಷಿ ಮುನಿಗಳು, ಸೂಫಿ ಸಂತರು ನಮ್ಮ ದೇಶದ ಆಸ್ತಿಯಿದ್ದಂತೆ. ನಾಡಿನ ಜನರ ಶಾಂತಿಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ತ್ಯಾಗ ಮಾಡಿದ ಮಹಾನುಭಾವರು ಅವರು. ಸಂತರು, ಶರಣರ ತತ್ವಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಂಡು ಅದರಂತೆ ನಡೆದಾಗ ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸೆ, ಭ್ರಷ್ಟಾಚಾರ, ಭಯೋತ್ಪಾದನೆ ತಡೆಗಟ್ಟಲು ಸಾಧ್ಯ. ಅಂತಹ ಮಹನೀಯರ ಮಾರ್ಗದರ್ಶನದಲ್ಲಿ ನಾವು ಮುಂದುವರೆಯಬೇಕು. ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಾಂತಿ ನೆಮ್ಮದಿಗಾಗಿ ಸಂಕಲ್ಪ ಮಾಡೋಣ ಎಂದು ಅವರು ತಿಳಿಸಿದರು.
ಮನುಷ್ಯ ಮಾನವೀಯತೆ ಗುಣಗಳನ್ನು ಮರೆತಿದ್ದಾನೆ. ಹಿಂಸೆಯನ್ನು ಬಿಟ್ಟು ಅಹಿಂಸಾ ಮಾರ್ಗದಲ್ಲಿ ನಡೆದು ಸಣ್ಣತನ ತೋರಿದ್ದಾನೆ. ಮನುಷ್ಯ ವೌಲ್ವಿಕ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಜಾತಿ, ಮತ ದಿಂದ ಯಾರು ದೊಡ್ಡವರಾಗುವದಿಲ್ಲ ನೀತಿಯಿಂದ ದೊಡ್ಡವರಾಗುತ್ತಾರೆ. ಸೂಫಿ ಸಂತರ, ಶರಣರ, ದಾಸರ ತತ್ವಾಗಳ ಸಾರ ಮನುಜಕುಲವನ್ನು ಉನ್ನತಗೊಳ್ಳಿಸಿದೆ ಎಂದರು.
ನಗರ ಸಭೆ ಸದಸ್ಯ ಮೌಲಾ, ಶಬೀರ್, ಎಸ್.ಎನ್.ಕ್ರಿಯಾ ಟ್ರಸ್ಟ್ ಸದಸ್ಯರಾದ ಆನೂರು ದೇವರಾಜು, ನಾರಾಯಣರೆಡ್ಡಿ, ಮಂಜುನಾಥ್, ನಯಾಜ್, ಬಾಬುಹುಸೇನ್, ಸೈಯದ್ ಶರೀಷ್, ಅಲಿಮ್, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶ್ವತ್ಥ ನಾರಾಯಣರೆಡ್ಡಿ, ನಯಾಜ್, ಷರೀಫ್, ಅಲೀಮ್, ಬಾಬಾ, ಜಮೀರ್, ಅಫ್ಸರ್, ಜಬಿ, ಸುಮೀರ್, ತಬ್ಬು ಹಾಜರಿದ್ದರು.