21.1 C
Sidlaghatta
Thursday, December 26, 2024

ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉಪನ್ಯಾಸ ಕಾರ್ಯಕ್ರಮ

- Advertisement -
- Advertisement -

Sidlaghatta : ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆತಲ್ಲಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಬರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆದರ್ಶಪ್ರಾಯರಾಗಿರಬೇಕು. ಸ್ಪಷ್ಟ ಗುರಿ ಹಾಗು ಸಾಧಿಸುವ ಚಲ ನಿಮ್ಮಲ್ಲಿದ್ದರೆ ಆಗ ನಿರೀಕ್ಷಿತ ಫಲ, ಫಲಿತಾಂಶ ಖಂಡಿತ ಸಿಗಲಿದೆ ಎಂದು ಪ್ರವಚನಕಾರ ತಳಗವಾರ ಆನಂದ್ ತಿಳಿಸಿದರು.

ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯ ಆವರಣದಲ್ಲಿ ಭಾನುವಾರ ಡಾಲ್ಫಿನ್ ವಿದ್ಯಾಸಂಸ್ಥೆ, ವಾಸವಿ ವಿದ್ಯಾಸಂಸ್ಥೆ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇವಲ ಓದು ಮಾತ್ರ ಸಾಲದು, ಬದಲಿಗೆ ಕೌಶಲ್ಯಭರಿತ ಶಿಕ್ಷಣ ಪಡೆಯುವುದರಿಂದ ಮಾತ್ರ ವಿದ್ಯಾರ್ಥಿ ಪರಿಪೂರ್ಣತೆಯತ್ತ ಸಾಗಬಹುದು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆತ್ಮವಿಶ್ವಾಸವನ್ನು ಕಳೆದು ಕೊಳ್ಳಬಾರದು. ಕಷ್ಟ ಪಟ್ಟು ಓದುವ ಬದಲು ಇಷ್ಟ ಪಟ್ಟು ಓದಬೇಕು. ಕೇವಲ ಪಠ್ಯದಿಂದ ಯಾವುದೇ ಸಾಧನೆ ಮಾಡಲಾಗುವುದಿಲ್ಲ ಕೌಶಲ್ಯ ಭರಿತ ಶಿಕ್ಷಣ ವನ್ನು ಪಡೆದು ಯಶಸ್ಸಿನೆಡೆಗೆ ಸಾಗಬೇಕು. ನಿರಂತರವಾದ ಅಧ್ಯಯನ ಶೀಲರಾಗಿರಿ. ಕಲಿಕೆ ನಿಂತ ನೀರಲ್ಲ ಅದೊಂದು ಪ್ರವಾಹ, ಈಜಿ ದಡಸೇರಿದಾಗಲೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಅದರಲ್ಲಿ ಅಡಗಿರುವ ಜ್ಞಾನದ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಟಿಡಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಕಲ್ಬುರ್ಗಿ ವಿದ್ಯಾರ್ಥಿಗಳಿಗೆ ಧ್ಯಾನ ಮತ್ತು ಶಿಕ್ಷಣದಲ್ಲಿ ಅದರ ಉಪಯುಕ್ತತೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು.

ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್. ಪ್ರಾಂಶುಪಾಲರಾದ ಅರೀಫ್‌ಅಹ್ಮದ್, ಮುನಿಶಾಮಪ್ಪ, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೂಪಸಿರಮೇಶ್, ಶಿಕ್ಷಕರಾದ ಅಮರನಾಥ್, ನಜ್ಮಾ, ರಮೇಶ್, ವೆಂಕಟರೆಡ್ಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಅಜಯ್‌ಕೀರ್ತಿ ಹಾಜರಿದ್ದರು.


Unlocking Hidden Talents Through Skilful Education

Sidlaghatta : Proper guidance for students can bring out their hidden talents. Former President of the country, Abdul Kalam, should serve as an inspiration to every student. Talagawara Anand, a motivational speaker, emphasized that clear goals and a desire to achieve them are crucial for obtaining expected and desired results.

This motivational lecture was held on Sunday at the premises of the Dolphin Institute in Sidlaghatta city, organized by the Dolphin Institute, Vasavi Institute, and Lions Club. Anand highlighted that studying alone is insufficient, and only through skilful education can a student progress towards perfection. He advised students to read extensively and not to lose confidence under any circumstances.

Anand emphasized that skillful education is essential for success and achievement, and encouraged students to make constant learning a part of their lives. Learning is not stagnant, but rather a flood that can lead to significant accomplishments when one swims towards the shore. He also urged students not to become slaves to technology, but to take advantage of the knowledge that it offers.

During the event, Suresh Kalburgi, the Executive Director of the CTD Institute, provided practical training to students on meditation and its usefulness in education.

The Managing Director of Dolphin Institute, N. Ashok, as well as Principals Arif Ahmed and Munishamappa, Secretary of Vasavi Vidyasagansha Rupasiramesh, and teachers Amarnath, Najma, Ramesh, and Venkatareddy, as well as Lions Club President Ajaykeerthy, were all in attendance.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!