Sidlaghatta : ಶಿಡ್ಲಘಟ್ಟ ತಾಲ್ಲೂಕಿನ BGS ಶಾಲೆಯ ವಿದ್ಯಾರ್ಥಿನಿ ಜಿ.ಹರ್ಷಿತ SSLC ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳಿಸುವ ಮೂಲಕ ತಾಲ್ಲೂಕಿಗೆ ಮೊದಲಿಗಳಾಗಿ (Topper) ಹೊರಹೊಮ್ಮಿದ್ದು, ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಒದಗಿಸಿರುವರು ಎಂದು ABD Group Trust ಅಧ್ಯಕ್ಷ ಹಾಗೂ Congress ಮುಖಂಡ ರಾಜೀವ್ ಗೌಡ ತಿಳಿಸಿದರು.
ನಗರದ ಕಾಮಾಟಿಗರ ಪೇಟೆಯ ವಿ.ಎಲ್.ಗಣೇಶ್ ಹಾಗೂ ಎಚ್.ಎಸ್.ಅನುರಾಧ ದಂಪತಿಯ ಪುತ್ರಿ ಜಿ.ಹರ್ಷಿತ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿ 25 ಸಾವಿರ ರೂ ಪ್ರೋತ್ಸಾಹಧನ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿನಿ ಹರ್ಷಿತ ರವರ ಆಸೆಯಂತೆ ಮುಂದಿನ ದಿನಗಳಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಲು ನಮ್ಮ ಎಬಿಡಿ ಗ್ರೂಪ್ ಟ್ರಸ್ಟ್ ವತಿಯಿಂದ ಎಲ್ಲಾ ರೀತಿ ಆರ್ಥಿಕ ನೆರವು ನೀಡುತ್ತೇವೆ ಎಂದು ವಿದ್ಯಾರ್ಥಿನಿಯ ಪೋಷಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯ ಮಂಜುನಾಥ್, ಅಕ್ರಂ ಪಾಷ್, ರಿಯಾಜ್ ಪಾಷ, ತನ್ವೀರ್ ಪಾಷ, ಎಬಿಡಿ ಸದಸ್ಯರಾದ ನಾರಾಯಣಸ್ವಾಮಿ (ಬಂಗಾರಪ್ಪ), ಕೃಷ್ಣಪ್ಪ, ಮಂಜುನಾಥ್, ಚಂದ್ರಣ್ಣ, ನರೇಂದ್ರ, ವಿದ್ಯಾರ್ಥಿನಿ ಜಿ.ಹರ್ಷಿತ ಅವರ ತಂದೆ ವಿ.ಎಲ್.ಗಣೇಶ್, ತಾಯಿ ಎಚ್.ಎಸ್.ಅನುರಾಧ ಹಾಗೂ ಶಿಕ್ಷಕರು ಹಾಜರಿದ್ದರು.