Sidlaghatta : SSLC ಮರುಮೌಲ್ಯಮಾಪನದಲ್ಲಿ (Revaluation) ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯ (The Crescent School) ವಿದ್ಯಾರ್ಥಿನಿ ಎಸ್.ಡಿ.ನಿಧಿಶ್ರೀ (S D Nidhishree) 625 ಕ್ಕೆ 625 ಅಂಕಗಳನ್ನು ಪಡೆದು Topper ಆಗಿದ್ದಾರೆ.
ಕಳೆದ ಮೇ 19 ರಂದು ಪ್ರಕಟವಾದ SSLCಫಲಿತಾಂಶದಲ್ಲಿ ನಗರದ ಹೊರವಲಯದ ಬಿಜಿಎಸ್ ಪಬ್ಲಿಕ್ ಶಾಲೆಯ (PGS Public School) ವಿದ್ಯಾರ್ಥಿನಿ ಜಿ.ಹರ್ಷಿತ ಶೇ 100 ರಷ್ಟು ಅಂಕಗಳನ್ನು ಪಡೆದು ತಾಲ್ಲೂಕಿಗೆ ಮೊದಲಿಗಳಾಗಿದ್ದಾಳು. ಇದೀಗ ಮರುಮೌಲ್ಯಮಾಪನದ ಫಲಿತಾಂಶ ಬಂದ ನಂತರ ತಾಲ್ಲೂಕಿನ ಇಬ್ಬರು ವಿದ್ಯಾರ್ಥಿನಿಯರು ಮೊದಲಿಗರಾಗಿರುವರು.
ಎಸ್.ಡಿ.ನಿಧಿಶ್ರೀ ಸೊಣ್ಣೇನಹಳ್ಳಿ ಗ್ರಾಮದವರಾಗಿದ್ದು, ರೇಷ್ಮೆ ಕೃಷಿಕರಾದ ದೇವರಾಜ್ ಮತ್ತು ಪ್ರತಿಭಾ ದಂಪತಿಯ ಮಗಳು.