Home News ಶ್ರೀಸಾಯಿನಾಥ ಜ್ಞಾನ ಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

ಶ್ರೀಸಾಯಿನಾಥ ಜ್ಞಾನ ಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ

0

ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ಹದಿನೈದನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀನಿವಾಸ ಕಲ್ಯಾಣೋತ್ಸವ, ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆಯನ್ನು ಆಯೋಜಿಸಲಾಗಿತ್ತು.

 “ಎರಡು ದಿನಗಳ ಕಾಲ ವಿಶೇಷ ಪೂಜೆ, ಹೋಮ ಹಾಗೂ ಅರ್ಚನೆಯನ್ನು ನಡೆಸಲಾಗುತ್ತಿದೆ. ಸೋಮವಾರ ಬೆಳಗ್ಗೆ  ಬಾಬಾರವರ ಪಲ್ಲಕ್ಕಿ ಉತ್ಸವವನ್ನು ನಡೆಸಲಿದ್ದೇವೆ. ಸಂಜೆ ಘಂಟಸಾಲ ಗಾಲ ಕಲಾ ವೃಂದದವರಿಂದ ಭಕ್ತಿ ಗೀತೆಗಳ ಗಾಯನ ಸಹ ಆಯೋಜಿಸಿದ್ದೇವೆ” ಎಂದು ದೇವಾಲಯದ ಪ್ರಮುಖ ಸೇವಾಕರ್ತ ನಾರಾಯಣಸ್ವಾಮಿ ತಿಳಿಸಿದರು.

 ಶ್ರೀನಿವಾಸ. ಶ್ರೀದೇವಿ ಮತ್ತು ಭೂದೇವಿ ಮೂರ್ತಿಗಳೊಂದಿಗೆ ಸಾಯಿಬಾಬಾ, ಸುದರ್ಶನ ಮತ್ತು ನರಸಿಂಹ ಸ್ವಾಮಿ ಮೂರ್ತಿಗಳನ್ನಿರಿಸಿದ್ದು, ನಾನಾ ವಿಧದ ಸುಮಾರು ಐದು ನೂರು ಕೇಜಿ ಹೂಗಳಿಂದ ಪುಷ್ಪಾರ್ಚನೆಯನ್ನು ಮಾಡಲಾಯಿತು. ಸುಮಂಗಲಿಯರಿಂದ ಕುಂಕುಮಾರ್ಚನೆಯನ್ನು ಸಹ ನಡೆಸಲಾಯಿತು. ಹೋಮ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಹಲವಾರು ಮಂದಿ ಭಕ್ತರು ಭಾಗಿಯಾಗಿದ್ದರು.