Sidlaghatta : ಶಿಡ್ಲಘಟ್ಟ ನಗರದ ಉಲ್ಲೂರುಪೇಟೆಯಲ್ಲಿರುವ ಪದ್ಮಶಾಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ 30 ನೇ ವರ್ಷದ ಶ್ರೀರಾಮನವಮಿ ಸಂಗೀತೋತ್ಸವ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.
ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಸಂಗೀತೋತ್ಸವದಲ್ಲಿ ವಿಧುಷಿ ಕೈವಾರ ಲಾವಣ್ಯ ಅವರಿಂದ ಗಾಯನಕ್ಕೆ ಪಿಟೀಲು ವಿದ್ವಾನ್ ಶಾಮಸುಂದರ್ , ಪಿಟೀಲು ವಿದ್ವಾನ್ ಜಗದೀಶ್ ಕುಮಾರ್, ಹಾಗೂ ಮೃದಂಗ ವಿದ್ವಾನ್ ನಾಗೇಂದ್ರ ಸಾಥ್ ನೀಡಿದರು. ಪಲಿಚೇರ್ಲು ಸುಬ್ಬಣ್ಣ ಮತ್ತು ತಂಡ, ಬಾಲಕೃಷ್ಣಸ್ವಾಮಿ ತಂಡ ಭಜನೆ ನಡೆಸಿಕೊಟ್ಟರು.
ಸದ್ಗುರು ಮಾತೆ ಮುಕ್ತಾಂಬಿಕೆದೇವಿ ಅವರಿಗೆ ಸನ್ಮಾನ ಮಾಡಲಾಯಿತು. ಪದ್ಮಶಾಲಿ ಶ್ರೀ ವೀರಾಂಜನೇಯಸ್ವಾಮಿ ಭಕ್ತಮಂಡಳಿಯವರಿಂದ ಪೂಜಾ ಸೇವೆ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಮೃದಂಗ ವಿದ್ವಾನ್ ಎಸ್.ವಿ.ನಾರಾಯಣಸ್ವಾಮಿ, ನಿರ್ವಾಹಕ ಎಸ್.ಎಸ್.ಲಕ್ಷ್ಮೀನಾರಾಯಣ ಹಾಜರಿದ್ದರು.
Sri Rama Navami Music Festival Delights Attendees at Padmasali Sri Veeranjaneyaswamy Temple
Sidlaghatta : The 30th annual Sri Rama Navami music festival took place on Sunday at the Padmasali Sri Veeranjaneyaswamy Temple in Ullurpet, Sidlaghatta city. The festival, which lasted from morning to evening, featured performances by violinists Shamasunder and Jagdish Kumar, Mridanga Vidwan Nagendra, and Vidushi Kaiwara Lavanya, who sang with support from the musicians.
The event also featured bhajan performances by Palicherlu Subbanna and team, as well as the Balakrishna Swamy team. Sadguru Mata Muktambike Devi was felicitated during the festival, and Padmasali Sri Veeranjaneyaswami Bhaktamandali conducted pooja services and distributed prasad to attendees.
The festival was attended by Mridanga Vidwan S.V. Narayanaswamy and Administrator S.S. Lakshminarayana, among others. The Sri Rama Navami music festival has become a beloved annual tradition for many in the community, providing an opportunity to celebrate the rich cultural heritage of the region.