Melur, Sidlaghatta : ಅಖಂಡ ಜೀವರಾಶಿಗಳ ಶ್ರೇಯೋಭಿವೃದ್ದಿ ಹಾಗು ಮಳೆ,ಬೆಳೆಗಾಗಿ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಡಸಂದ್ರದಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಒಂದು ದಿನದ ರಾಮ ನಾಮ ‘ಅಖಂಡ ರಾಮಕೋಟಿ’ ಯನ್ನು ಹಮ್ಮಿಕೊಂಡಿರುವ ಪ್ರಯುಕ್ತ ಶ್ರೀರಾಮ ದೇವರ ಪೋಟೋವಿಟ್ಟು, ಗರುಡಸ್ತಂಭದ ದೀಪದಲ್ಲಿ ಅಖಂಡ ಜ್ಯೋತಿ ಬೆಳಗಿಸಿ ರಾಮ ನಾಮ ಭಜನೆಯೊಂದಿಗೆ ಪೂಜೆಯನ್ನು ಈ ದಿನ ಬೆಳಿಗ್ಗೆ 10.30 ಕ್ಕೆ ಸಲ್ಲಿಸಿದರು, ಭಜನಾ ತಂಡದಿಂದ ರಾಮನಾಮ ಭಜನೆಯನ್ನು ಪ್ರತಿಸ್ಥಾಪಿಸಿದ್ದ ಶ್ರೀರಾಮ ,ಸೀತಾ,ಲಕ್ಷ್ಮಣ , ಆಂಜನೇಯಸ್ವಾಮಿ ದೇವರುಗಳಿಗೆ ಪ್ರದಕ್ಷಿಣೆ ಹಾಕುವ ಮೂಲಕ ಪ್ರಾರಂಭಿಸಲಾಯಿತು.ಮಹಾ ಮಂಗಳಾರತಿ ತೀರ್ಥ,ಅನ್ನ ಪ್ರಸಾದಗಳ ವಿನಿಯೋಗ ನಡೆಯಿತು.
ಪೂಜೆ ಪ್ರಯುಕ್ತ ಹಸಿರು ಎಲೆಗಳ ಹೊದಿಕೆಯುಕ್ತ ದ್ರಾಕ್ಷಿ ಹಣ್ಣಿನ ಹಾಗು ವಿಶೇಷ ಹೂವಿನ ಅಲಂಕಾರ ಆಕರ್ಷಿಣೀಯವಾಗಿತ್ತು.
ವಿಶೇಷ ಆಕರ್ಷಣೆಯೆಂದರೆ ಪೂಜೆ ಮಾಡಿ ರಾಮಕೋಟಿ ಭಜನೆ ಪ್ರಾರಂಭಗೊಂಡ ಅರ್ಧ ಗಂಟೆಯ ನಂತರ ಬಂದ ಶ್ರೀ ಆಂಜನೇಯಸ್ವಾಮಿಯ ರೂಪವಾದ “ವಾನರ ರೂಪ ಶ್ರೀ ಮಾರುತಿ ದೇವರು” ದೇವಾಲಯ ಆವರಣದ ಕಿಟಕಿಯಲ್ಲಿ ಇಣುಕಿ ನೋಡಿಕೊಂಡು ಒಂದು ಗಂಟೆಗು ಹೆಚ್ಚು ಸಮಯ ಸಾವಾದಾನವಾಗಿ ರಾಮಕೋಟಿಯ ರಾಮನಾಮ ಭಜನೆಯನ್ನು ಆಲಿಸಿ ಕುಳಿತಿದ್ದಿದ್ದು ವಿಶೇಷವಾಗಿತ್ತು
ಗ್ರಾಮದ ಅರ್ಚಕರಾದ ವೇಣುಗೋಪಾಲ್ ಚಾರ್ ಮಗ ಶ್ಯಾಮಸುಂದರ್ ವಿಶೇಷ ಪೂಜೆಗಳನ್ನು ಭಕ್ತಿ ಪೂರ್ವಕವಾಗಿ ನೆರವೇರಿಸಿದರು.
ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಅಖಂಡ ರಾಮಕೋಟಿಯಲ್ಲಿ ಭಾಗವಹಿಸಿ ದರ್ಶನ ಪಡೆದು ಪುನೀತರಾದರು.
Sri Rama Navami Festival Celebrations in Chowdasandra: A Grand Success
Melur, Sidlaghatta : The Sri Rama Navami festival was celebrated with great fervor in Chaudasandra, under the Melur Gram Panchayat of Taluk. The occasion was marked by the chanting of the ‘Akhand Ramakoti’, a continuous recitation of Lord Rama’s name for the prosperity of Akhand Rashi and the well-being of crops.
The Sri Anjaneyaswamy Temple was the center of the festivities, where a one-day Rama Nama Bhajan was performed. The image of Lord Rama was illuminated, and an Akhand Jyoti was lit in the Garudastambha lamp. The Bhajana team replaced the deities Sri Rama, Sita, Lakshmana, and Anjaneyaswamy as they circumambulated them.
The temple was decorated with grapes covered in green leaves and special flowers for the puja. The highlight of the event was the arrival of the “Monkey Lord Maruti God,” Sri Anjaneyaswamy, who listened to the Ramakoti Bhajan for over an hour, peering through the temple’s windows.
The village priest, Venugopal Char Maga Shyamsunder, performed special pujas with devotion, and devotees from the neighboring villages and beyond participated in the Akhand Ramakoti to seek blessings and darshan. The event was a grand success, and the devotees left with a sense of contentment and joy.