ಶ್ರೀ ಓಂ ಶಕ್ತಿ ದೇವಿ, ಶ್ರೀ ಪ್ರತ್ಯಂಗಿರಾ ದೇವಿ, ನಾಗದೇವತೆಗಳು, ಸಪ್ತ ಮಾತೃಕೆಯರು, ಶ್ರೀವಿನಾಯಕ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ವೀರಬ್ರಹ್ಮಯ್ಯ ಮತ್ತು ಶ್ರೀ ಕೈವಾರ ತಾತಯ್ಯನವರ ವಿಗ್ರಹಗಳನ್ನು ಓಂ ಶಕ್ತಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಓಂ ಶಕ್ತಿ ದೇವಾಲಯದಲ್ಲಿ ವಿಶೇಷ ಹೋಮ ಪೂಜೆಗಳನ್ನು ನೆರೆವೇರಿಸಲಾಯಿತು. ನೂತನ ಮೂರ್ತಿಗಳನ್ನು ದೇವಾಲಯದಲ್ಲಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಗ್ರಾಮಸ್ಥರಿಂದ ದೀಪೋತ್ಸವ ಹಾಗೂ ಬೆಳಗಿನಿಂದಲೂ ದೇವಿಗೆ ವಿಶೇಷ ಪೂಜೆ, ಯಜ್ಞ, ಹೋಮಗಳನ್ನು ನೆರವೇರಿಸಲಾಯಿತು. ದೇವಿಯನ್ನು ವಿವಿಧ ಹೂಗಳಿಂದ ಸಿಂಗರಿಸಿ, ಭಕ್ತರು ಬೆಳಗಿನ ಜಾವದಿಂದಲೇ ವಿಶೇಷ ಪೂಜೆ, ನೈವೇದ್ಯಗಳನ್ನು ಸಮರ್ಪಿಸಿ ಹೋಮಗಳನ್ನು ನೆರವೇರಿಸಿದರು.
ದೇವಾಲಯಕ್ಕೆ ಆಗಮಿಸಿದ ಎಲ್ಲಾ ಭಕ್ತರಿಗೆ ದೇವಸ್ಥಾನದ ವತಿಯಿಂದ ತೀರ್ಥ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಮೇಲೂರು ಸಚಿನ್, ತಾದೂರು ರಘು, ರವಿ, ಲಕ್ಷ್ಮಿಪತಿ, ಶಿವಕುಮಾರ್, ದ್ವಾರಕೇಶ್, ಮುನಿಶಾಮಪ್ಪ ಕುಟುಂಬದವರು ಮತ್ತು ಗ್ರಾಮಸ್ಥರು ಹಾಜರಿದ್ದರು