Tummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತೀಯ ವಾಯುಸೇನೆಯ ಮಾಜಿ ಸೇನಾನಿ ಎಸ್. ವೆಂಕಟೇಶ್ ಅಯ್ಯರ್ ಅವರು ತಮ್ಮ ದಿವಂಗತ ಪತ್ನಿಯ ಸ್ಮರಣಾರ್ಥ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎಕ್ಸಾಮ್ ಪ್ಯಾಡ್,ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಿ ಭಾರತೀಯ ವಾಯುಸೇನೆಯ ಮಾಜಿ ಸೇನಾನಿ ಎಸ್.ವೆಂಕಟೇಶ್ ಅಯ್ಯರ್ ಮಾತನಾಡಿದರು.
ಮಕ್ಕಳೇ,ನಿಮಗೆ ಸೈನ್ಯ ಸೇರಬೇಕೆಂಬ ಆಸೆ ಇದೆಯೇ? ದೇಶ ಸೇವೆ ಮಾಡಬೇಕೆಂಬ ಹಂಬಲವಿದೆಯೇ? ಸೈನಿಕನ ದಿರಿಸು ಧರಿಸಿ ಗಡಿಯಲ್ಲಿ ಎದೆಯುಬ್ಬಿಸಿ ನಿಲ್ಲಬೇಕೆಂಬ ಛಲವಿದೆಯೇ? ಕೇವಲ ಕನಸಿದ್ದರೆ ಸಾಲದು, ಈಗಿನಿಂದಲೇ ಅದಕ್ಕೆ ತಯಾರಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ತಮ್ಮ ಯುದ್ದದ ಅನುಭವಗಳನ್ನು ಹಂಚಿಕೊಂಡರು. ಸೇನೆಗೆ ಸೇರಲು ಬೇಕಾದ ಅರ್ಹತೆಗಳನ್ನು ತಿಳಿಸಿದರು. ಮುಂದಿನ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆಯುವಂತೆ ವಿದ್ಯಾರ್ಥಿಗಳನ್ನು ಹರಸಿದರು.
ಮುಖ್ಯ ಶಿಕ್ಷಕ ಮಂಜುನಾಥ್ ಮಾತನಾಡಿ, ಉತ್ತಮ ಫಲಿತಾಂಶ ಪಡೆದು ಸತ್ಪ್ರಜೆಗಳಾಗುವಂತೆ ವಿದ್ಯಾರ್ಥಿಗಳಿಗೆ ಹಾರೈಸಿದರು
ಶಾಲಾವತಿಯಿಂದ ಮಾಜಿ ಸೇನಾನಿ ಎಸ್.ವೆಂಕಟೇಶ್ ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಶಿಕ್ಷಕರಾದ ವಿಜಯಶ್ರೀ, ನಾಗರಾಜ್, ಹೇಮಾವತಿ, ಮಾಲತಿ, ಶ್ರೀ ಗಣೇಶ್, ಮಹೇಶ್ ಹಾಜರಿದ್ದರು.