Byrasandra, Sidlaghatta : ಮಹಿಳೆಯರು ಕುಟುಂಬ ನಿರ್ವಹಣೆಯಲ್ಲಿ ವಹಿಸಬೇಕಾದ ಜಾಣ್ಮೆ, ಹಣಕಾಸು ವ್ಯವಹಾರ, ಮಕ್ಕಳ ಶಿಕ್ಷಣ, ವೈಯಕ್ತಿಕ ಶುಚಿತ್ವ ಹಾಗು ಪರಿಸರ ಕಾಳಜಿ ಸೇರಿದಂತೆ ಸೂಕ್ತ ಮಾಹಿತಿ ಒದಗಿಸುವಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಶಗೌಡ ಹೇಳಿದರು.
ತಾಲ್ಲೂಕಿನ ಬೈರಸಂದ್ರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಶಿಡ್ಲಘಟ್ಟ ಇವರ ವತಿಯಿಂದ ಬೃಂದಾವನ ಹೆಸರಿನ ಹೊಸ ಜ್ಞಾನವಿಕಾಸ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವಿಕಾಸ ಕಾರ್ಯಕ್ರಮ ಮಾತೃಶ್ರೀ ಡಾ.ಹೇಮಾವತಿ ವಿ ಹೆಗ್ಗಡೆ, ಅಮ್ಮನವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು, ಮಹಿಳೆಯರಿಗಾಗಿಯೇ ಜಾರಿಗೆ ತರಲಾಗಿದೆ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಅವರ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗುವಂತಹ ಅನೇಕ ವಿಷಯಗಳ ಕುರಿತು ಜ್ಞಾನವಿಕಾಸ ಕೇಂದ್ರದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಪೂಜ್ಯ ಡಾ.ವೀರೇಂದ್ರಹೆಗ್ಗಡೆ ಯವರ ಆಶಯದಂತೆ ಸ್ವಾಸ್ಥ್ಯ ಸಮಾಜದ ನಿರ್ಮಾಣ, ದುರ್ಬಲ ವರ್ಗದವರ ಆರ್ಥಿಕ ಸಬಲತೆ, ಸರ್ವರಿಗೂ ಆರೋಗ್ಯ ಭಾಗ್ಯ ದಂತಹ ವಿವಿಧ ಕಾರ್ಯಕ್ರಮಗಳನ್ನು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮಾಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಭೈರಸಂದ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಾರಾಯಣಸ್ವಾಮಿ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರವಿ, ಜ್ಞಾನವಿಕಾಸ ಸಮನ್ವಯಧಿಕಾರಿ ಅರುಣಾ, ವಲಯ ಮೇಲ್ವಿಚಾರಕ ಸ್ವಾಮಿ, ಒಕ್ಕೂಟದ ಅಧ್ಯಕ್ಷರು, ಸೇವಾಪ್ರತಿನಿಧಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.