ತಾಡಪತ್ರಿಯಲ್ಲಿ ನಡೆದ ಅಂತರರಾಜ್ಯ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆಂಧ್ರದ ಯೂತ್ ಅಂಡ್ ಸ್ಪೋರ್ಟ್ಸ್ ಡೆವಲೆಪ್ ಮೆಂಟ್ ಅಸೋಸಿಯೇಷನ್ ಸ್ಕೇಟಿಂಗ್ ಸ್ಪರ್ಧೆಯನ್ನು ತಾಡಪತ್ರಿಯ ಸರ್ಕಾರಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಿತ್ತು.
ಮೋಹಿತ್ ಪ್ರಕಾಶ್, 100 ಮೀಟರ್ ರೋಡ್ ರೇಸ್ ನಲ್ಲಿ ಮತ್ತು 500 ಮೀಟರ್ ರಿಂಕ್ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆದರೆ, ಧನುಷ್, 100 ಮೀಟರ್ ರೋಡ್ ರೇಸ್ ನಲ್ಲಿ ದ್ವಿತೀಯ ಮತ್ತು 500 ಮೀಟರ್ ರಿಂಕ್ ರೇಸ್ ನಲ್ಲಿ ಪ್ರಥಮ ಸ್ಥಾನ ಪಡೆದಿರುವನು. ವಿಶ್ವಕ್ ಸೇನ್ 100 ಮೀಟರ್ ರೋಡ್ ರೇಸ್ ನಲ್ಲಿ ತೃತೀಯ ಮತ್ತು 500 ಮೀಟರ್ ರಿಂಕ್ ರೇಸ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ ಎಂದು ಸ್ಕೇಟಿಂಗ್ ಶಿಕ್ಷಕ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.