ನಂದಿ ರೈಡರ್ಸ್ ಸ್ಕೇಟಿಂಗ್ ಟ್ರೈನಿಂಗ್ ಸೆಂಟರ್ ಆಯೋಜಿಸಿದ್ದ ಮೊದಲನೇ ಆನ್ ಲೈನ್ ರಾಷ್ಟ್ರೀಯ ಮಟ್ಟದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವಿದ್ಯಾರ್ಥಿಗಳು ಹಲವು ಪದಕಗಳನ್ನು ಪಡೆದಿದ್ದಾರೆ ಎಂದು ಶಿಕ್ಷಕ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.
ನಿಶ್ಚಿತ್ (ಕ್ವಾಡ್) ಬೆಳ್ಳಿ ಪದಕ, ಮೋಹಿತ್ ಪ್ರಕಾಶ್ (ಕ್ವಾಡ್) ಚಿನ್ನದ ಪದಕ, ಕೆ.ಎಸ್.ವಿಶ್ವಕ್ಸೇನ್ (ಕ್ವಾಡ್) ಕಂಚಿನ ಪದಕ, ಆರ್.ಆರ್ಯರುಷೀಲ್ (ಕ್ವಾಡ್) ಕಂಚಿನ ಪದಕ, ಸಿ.ಗೀತಿಕಾ (ಬಿಗಿನರ್) ಚಿನ್ನದ ಪದಕ, ಆರ್.ಎಂ.ಧನುಷ್ (ಇನ್ ಲೈನ್) ಬೆಳ್ಳಿ ಪದಕ, ಆರ್.ಮೋಹಿತ್ (ಇನ್ ಲೈನ್) ಚಿನ್ನದ ಪದಕ ಪಡೆದಿದ್ದಾರೆ.