ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಪ್ರಗತಿಪರ ರೇಷ್ಮೆ ಬೆಳೆಗಾರ ನಾಗೇಶ್ ಅವರ ಹುಳು ಸಾಕಾಣಿಕೆಯ ಮನೆಯಲ್ಲಿ ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡದಿಂದ ಊಜಿನೊಣದ ನಿರ್ವಹಣೆಯಲ್ಲಿ ಲಿಂಗಾಕರ್ಷಕ ಬಲೆಯ ಬಳಕೆಯ ಕುರಿತು ರೇಷ್ಮೆಕೃಷಿಕರಿಗೆ ಹೊರಾಂಗಣ ತರಬೇತಿ ಕಾರ್ಯಾಗಾರದಲ್ಲಿ ಪ್ರಾತ್ಯಕ್ಷಿಕೆ ನೀಡಿ ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವಿನೋದ ಮಾತನಾಡಿದರು.
ರೇಷ್ಮೆ ಬೆಳೆಯಲ್ಲಿ ಊಜಿ ನೊಣಗಳ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನವನ್ನು ಅವಿಷ್ಕರಿಸಿದ್ದು, ಅದರಿಂದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಪ್ರತಿ ಕೀಟವೂ ತನ್ನದೇ ಆದ ಫೆರಮೋನ್‌ಗಳನ್ನು ಸ್ರವಿಸಿ ವಿರುದ್ಧ ಲಿಂಗಿ ಜೀವಿಗಳನ್ನು ತನ್ನತ್ತ ಸೆಳೆದು ಅದರೊಡನೆ ಸಂಯೋಜನೆ ಹೊಂದಿ ವಂಶಾಭಿವೃದ್ಧಿ ಮಾಡುತ್ತದೆ. ಹಾಗೆಯೇ ಊಜಿಯಲ್ಲಿಯೂ ಸಹ ಹೆಣ್ಣುನೊಣ ಸ್ರವಿಸುವ ಫೆರಮೋನ್‌ನ್ನು ಹಳದಿ ಅಂಟುಪಟ್ಟಿಯ ಜೊತೆ ಬಳಸಿದಾಗ ಆಕರ್ಷಿತವಾಗುವ ಗಂಡುನೊಣಗಳು ಅಂಟುಪಟ್ಟಿಗೆ ಸಿಲುಕಿ ಸಾಯುತ್ತವೆ. ಆಗ ಒಂದೊಮ್ಮೆ ಹೆಣ್ಣುನೊಣಗಳು ಹುಳುಮನೆಯ ಒಳಹೊಕ್ಕಿ ಮೊಟ್ಟೆಯಿಟ್ಟರೂ ಅವು ಫಲಿತಗೊಳ್ಳದೆ ಇರುವುದರಿಂದ ಮುಂದೆ ವಂಶಾಭಿವೃದ್ಧಿಯಾಗುವುದಕ್ಕೆ ತಡೆ ಬೀಳುವುದು. ಇದರಿಂದ ಊಜಿ ನಿರ್ವಹಣೆ ತುಂಬಾ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ತಿಳಿಸಿಕೊಟ್ಟರು.
ರೈತರಿಗೆ ಪ್ರಾತ್ಯಕ್ಷಿಕೆ ವಸ್ತುಗಳನ್ನು ನೀಡಿ, ಊಜಿ ನಿಯಂತ್ರಣದ ಕುರಿತಾದ ವರದಿಯನ್ನು ನೀಡುವಂತೆ ವಿಜ್ಞಾನಿಗಳು ವಿನಂತಿಸಿದರು.
ಬೋದಗೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಬೇಸಾಯಶಾಸ್ತ್ರ ತಜ್ಞ ವಿಶ್ವನಾಥ್, ವಿಸ್ತರಣಾ ವಿಜ್ಞಾನಿ ಡಾ.ತನ್ವೀರ್ ಅಹಮದ್, ರೇಷ್ಮೆ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿ.ಇ.ಓ. ಜನಾರ್ಧನ್‌ಮೂರ್ತಿ, ಎಚ್.ಕೆ ಸುರೇಶ್, ಬಿ.ಎನ್.ಮುನಿರಾಜು, ಪ್ರಭಾಕರ್, ಎಚ್.ಕೆ.ಸುರೇಶ್, ಬಿ.ಎನ್.ಸುರೇಶ್, ಅಭಿಲಾಶ್ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi