ಕಿರುಕುಳ ತಾಳಲಾರದೇ ಯುವಕನೋರ್ವ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯ ಮುನಿಕೃಷ್ಣ (28) ಮೃತ ದುರ್ದೈವಿ ಎನ್ನಲಾಗಿದೆ.
ವಿವಾಹಿತ ಮಹಿಳೆಯೋರ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮುನಿಕೃಷ್ಣನಿಗೆ ಇತ್ತೀಚೆಗೆ ಬೇರೊಬ್ಬ ಯುವತಿಯೊಂದಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ವಿವಾಹಿತ ಮಹಿಳೆಯಿಂದ ಅಂತರ ಕಾಪಾಡಲು ಮುಂದಾದ ಮುನಿಕೃಷ್ಣನಿಗೆ ವಿವಾಹಿತ ಮಹಿಳೆಯಿಂದ ಕಿರುಕುಳ ಶುರುವಾಗಿತ್ತು. ಆಕೆಯ ಕಾಟ ಸಹಿಸಲಾಗದೇ ಬೇಸತ್ತ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಹಿಳೆಯ ಕಿರುಕುಳ ಸಹಿಸಲಾರದೇ ಸೆಲ್ಪಿ ವಿಡಿಯೋ ಮಾಡಿ ತಲೆ ಚಚ್ಚಿಕೊಂಡಿರುವುದು ಸೇರಿದಂತೆ ವಿಷ ಸೇವಿಸುವ ದೃಶ್ಯಗಳು ಆತನ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.