Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ (Tummanahalli Grama Panchayat) ತಿಪ್ಪೇನಹಳ್ಳಿಯಲ್ಲಿನ (Tippenahalli) 50 ಎಕರೆ ಸರ್ಕಾರಿ ಜಮೀನಿನಲ್ಲಿ ನರೇಗಾ ಯೋಜನೆಯಡಿ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯಿಂದ ವಿಶ್ವ ಪರಿಸರ ದಿನಾಚರಣೆ (World Environment Day) ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ (MLA V Muniyappa) ಅವರು ಮಾತನಾಡಿದರು.
ಪರಿಸರವನ್ನು ಎಷ್ಟರ ಮಟ್ಟಿಗೆ ನಾಶಪಡಿಸಿದ್ದೇವೆಂದರೆ ಪರಿಸ್ಥಿತಿ ಕೈ ಮೀರಿದೆ, ಈಗಲಾದರೂ ನಾವು ಎಚ್ಚೆತ್ತುಕೊಂಡರೆ ಮಾತ್ರವಷ್ಟೆ ನಮ್ಮ ಬದುಕು ಉತ್ತಮಗೊಳ್ಳಲಿದೆ. ಪರಿಸರ ದಿನಾಚರಣೆಯು ಕೇವಲ ಸಾಂಕೇತಿಕವಾಗಿ ಕಾರ್ಯಕ್ರಮ ಆಗಬಾರದು, ನಮ್ಮ ಬದುಕಿನ ಉದ್ದಕ್ಕೂ ಪರಿಸರವನ್ನು ಉಳಿಸುವ ಕಾರ್ಯ ಎಲ್ಲರಿಂದಲೂ ಎಲ್ಲ ಸಮಯದಲ್ಲೂ ಆಗಬೇಕೆಂದು ಹೇಳಿದರು.
ಪೂಜೆ ನೆರವೇರಿಸಿ ಗಿಡ ನೆಡುವ ಮೂಲಕ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ತಹಶೀಲ್ದಾರ್ ಬಿ.ಎಸ್.ರಾಜೀವ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಗಂಜಿಗುಂಟೆ ಮೌಲ, ಸುಶೀಲಮ್ಮ, ಮಾರುತಿ, ನರಸಿಂಹಮೂರ್ತಿ, ಬೈರೇಗೌಡ, ದೇವರಾಜ್, ಲಕ್ಷ್ಮೀನಾರಾಯಣ್, ಭರತ್, ಜಿ.ಕೆ.ನಾಗರಾಜ್, ಮಂಜುನಾಥ್ ಹಾಜರಿದ್ದರು