ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯ ತಾಲ್ಲೂಕು ಶಾಖೆಯ ಗೌರವಾಧ್ಯಕ್ಷರಾಗಿ ಉಪತಹಸೀಲ್ದಾರ್ ಕೆ.ಎನ್.ಎಂ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ನಗರದ ಶ್ರೀ ಕಾಳಿಕಾಂಬ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ತಾಲ್ಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಸಭೆಯಲ್ಲಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಶಾಖೆ ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ಲೂಡಿನ ಸಿಆರ್‌ಪಿ ಸುರೇಶ್‌ಬಾಬು ಆಯ್ಕೆಯಾದರೆ, ಪ್ರಧಾನ ಕಾರ್ಯದರ್ಶಿಯಾಗಿ ಭಕ್ತರಹಳ್ಳಿಯ ಸಿಆರ್‌ಪಿ ಎಸ್.ಎ.ನರಸಿಂಹರಾಜು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆನೂರು ಪಿಡಿಓ ಕುಮಾರಿ ಕಾತ್ಯಾಯಿನಿ, ಕೋಟಹಳ್ಳಿ ಶಿಕ್ಷಕ ನಾಗರಾಜ್, ದೊಡ್ಡತೇಕಹಳ್ಳಿ ಶಿಕ್ಷಕ ವೆಂಕಟಾಚಲಪತಿ, ಖಜಾಂಚಿಯಾಗಿ ಜಿ.ವೆಂಕಟೇಶ್, ಜಂಟಿ ಕಾರ್ಯದರ್ಶಿಗಳಾಗಿ ಎಂ.ವೆಂಕಟೇಶಪ್ಪ, ಶ್ರೀನಿವಾಸ್, ಅಶ್ವತ್ಥಪ್ಪ, ರಾಮಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ರವಿಕುಮಾರ್, ಟಿ.ಟಿ.ನರಸಿಂಹಪ್ಪ, ಜೈ ಶಂಕರ್, ಬಿ.ಎಂ.ಮಂಜುನಾಥ, ಎನ್.ರವಿ. ಎಂ.ತಿರುಮಳಪ್ಪ, ಕಾನೂನು ಸಲಹೆಗಾರರಾಗಿ ಆರ್.ವಿಕಾಸ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಗೋವಿಂದ ಆಯ್ಕೆಯಾಗಿದ್ದಾರೆ.