Sidlaghatta : ಶಿಡ್ಲಘಟ್ಟ ತಾಲ್ಲೂಕು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷರಾಗಿ ಚೆಲುವರಾಜ್ ಅವರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ಕೋಲಾರ ವಿಭಾಗ ಕಾರ್ಯದರ್ಶಿ ಶ್ರೀ ಗೌರಿಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಚೆಲುವರಾಜ್, ಉಪಾಧ್ಯಕ್ಷರಾಗಿ ಗಂಗಾಧರ್ ಮತ್ತು ಮೇಲೂರು ಮಹೇಶ್, ಕಾರ್ಯದರ್ಶಿಯಾಗಿ ಮಲ್ಲೇಶ್, ಸಹ ಕಾರ್ಯದರ್ಶಿಯಾಗಿ ಶ್ರೀನಾಥ್ (ಬಜರಂಗದಳ), ಸಂಯೋಜಕರಾಗಿ ವೆಂಕೋಬರಾವ್ ಎನ್., ನಗರ ಘಟಕದ ಸಂಯೋಜಕರಾಗಿ ಕಿಶೋರ್ ಹಾಗೂ ಗೋರಕ್ಷಾ ಪ್ರಮುಖರಾಗಿಯಾಗಿ ರಾಮಮೂರ್ತಿ ಅವರನ್ನು ಆಯ್ಕೆ ಮಾಡಲಾಯಿತು. ಈ ಆಯ್ಕೆಗಳನ್ನು ಗೌರಿಶಂಕರ್ ಅಧಿಕೃತವಾಗಿ ಘೋಷಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಹಾಗೂ ಜಿಲ್ಲಾ ಸಹ ಕಾರ್ಯದರ್ಶಿ ಪ್ರಕಾಶ್ ಉಪಸ್ಥಿತರಿದ್ದು ನೂತನ ತಂಡಕ್ಕೆ ಶುಭಾಶಯಗಳನ್ನು ಸಲ್ಲಿಸಿದರು.