Sidlaghatta : ನಗರಸಭೆಯ 14ನೇ ಹಣಕಾಸು ಯೋಜನೆಯ ಉಳಿಕೆ ಅನುದಾನ ರೂ 41.53 ಲಕ್ಷಗಳ ವೆಚ್ಚದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಒಳಚರಂಡಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಸೋಮವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ನಗರ ವ್ಯಾಪ್ತಿಯ ಅಶೋಕ ರಸ್ತೆಯ ಪುನೀತ್ ರಾಜ್ ಕುಮಾರ್ ವೃತ್ತದಿಂದ ಶಂಕರ ಮಠ ರಸ್ತೆ ಶಾಮಣ್ಣ ಬಾವಿಯಿಂದ ಸಂತೆ ಬೀದಿ ಮುಖಾಂತರ ಕೆಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರಿಗೆ ಹಾದು ಹೋಗುವ ಒಳಚರಂಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಮುಂದುವರೆದಂತೆ ನಗರ ವ್ಯಾಪ್ತಿಯಲ್ಲಿ ಎಲ್ಲಾ ನಗರಸಭಾ ಸದಸ್ಯರ ಪಾಲ್ಗೊಳ್ಳುವಿಕೆಯ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ಉಪಾಧ್ಯಕ್ಷೆ ರೂಪಾ ನವೀನ್, ಪೌರಾಯುಕ್ತ ಮಂಜುನಾಥ್, ಎಂಜಿನಿಯರ್ ಗಳಾದ ಲತಾ, ಸಭಾ ಅಂಜಾನ್, ಸದಸ್ಯರಾದ ಸುಮಿತ್ರ ರಮೇಶ್, ಲಕ್ಮಿನಾರಾಯಣ್, ಮನೋಹರ್, ಅನಿಲ್, ಸುರೇಶ್, ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಮಂಜುನಾಥ್, ಶಬೀರ್, ಬಾಲು ಹಾಜರಿದ್ದರು.