Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು (Kothanur) ಮತ್ತು ಬಚ್ಚಹಳ್ಳಿ (Bachahalli) ನಡುವೆ ಇರುವ ನಲ್ಲಪೋಚಮ್ಮ (Nallapochamma) ಮತ್ತು ಜೋಡಿ ಮುನೇಶ್ವರ ದೇವಸ್ಥಾನದ (Jodi Muneshwara Temple) ಸಮೀಪ ಬಂದಿದ್ದ ದೊಡ್ಡ ನಾಗರಹಾವು (Cobra Snake) ಕಂಡುಬಂದಿದ್ದು, ಈ ದೊಡ್ಡ ಗಾತ್ರದ ನಾಗರಹಾವು ದೇವಾಲಯದೊಳಗೆ ಬಂದು ಜನರೆಡೆಗೆ ಬುಸ್ ಬುಸ್ ಎಂದು ಫೂತ್ಕರಿಸುತ್ತಿದ್ದುದು ಕಂಡು ಜನರು ಗಾಬರಿಗೊಂಡರು.
ಕೊತ್ತನೂರಿನ ಸ್ನೇಕ್ ನಾಗರಾಜ್ (Snake Nagaraj) ಅವರಿಗೆ ಕರೆ ಮಾಡಲಾಗಿ, ಅವರು ಬಂದು ಹಾವನ್ನು ಚೀಲದೊಳಗೆ ಹಾಕಿ, ನಂತರ ಅದನ್ನು ಕಾಡಿನಲ್ಲಿ ಬಿಡುಗಡೆ ಮಾಡಿದರು.
“ದೇವಾಲಯಕ್ಕೆ ಜನರು ಬಂದು ಹೋಗುತ್ತಿರುತ್ತಾರೆ. ಅಕಸ್ಮಾತ್ ಅದು ಗಾಬರಿಗೊಂಡು ಕಚ್ಚಿದರೆ ಎಂದು ಜನರು ಭೀತರಾಗಿದ್ದರು. ಅದಕ್ಕಾಗಿ ಅದನ್ನು ಹಿಡಿದು ದೂರ ಬಿಟ್ಟೆ. ಇವುಗಳ ಹೆಡೆಯ ಹಿಂಭಾಗದಲ್ಲಿ ಜೋಡಿಸಿದ ಕನ್ನಡಕದ ಗುರುತಿರುವ ಚಿಹ್ನೆಯೊಂದಿದ್ದು, ಇದರಿಂದ ಈ ಹಾವುಗಳಿಗೆ ಕನ್ನಡಕದ ಹೆಡೆಗುರುತಿನ ನಾಗರಹಾವು (ಇಂಗ್ಲಿಷ್ ನಲ್ಲಿ ಸ್ಪೆಕ್ಟೆಕಲ್ಡ್ ಕೋಬ್ರ) ಎನ್ನುವರು” ಎಂದು ಸ್ನೇಕ್ ನಾಗರಾಜ್ ತಿಳಿಸಿದರು.