Sidlaghatta : ಶಿಡ್ಲಘಟ್ಟ ನಗರದ ಉಲ್ಲೂರುಪೇಟೆಯ ಪದ್ಮಶಾಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ 31 ನೇ ವರ್ಷದ ಶ್ರೀರಾಮನವಮಿ ಸಂಗೀತೋತ್ಸವವನ್ನು ಆಯೋಜಿಸಲಾಗಿತ್ತು.
ಶ್ರೀರಾಮ ಭಕ್ತ ಸದ್ಗುರು ತ್ಯಾಗರಾಜರ, ಶ್ರೀ ಪುರಂದರದಾಸರ, ಶ್ರೀ ಕನಕದಾಸರ ಹಾಗೂ ಶ್ರೀ ಯೋಗಿ ನಾರೇಯಣ ಯತೀಂದ್ರರ ಕೃತಿಗಳೊಂದಿಗೆ ಸಂಗೀತ ಕಾರ್ಯಕ್ರಮಗಳು ನಡೆದವು.
ಪದ್ಮಶಾಲಿ ಸರಸ್ವತಿ ಭಜನಾ ಮಂಡಳಿಯಿಂದ ಭಕ್ತಿ ಗೀತೆಗಳ ಗಾಯನ, ಎಸ್.ವಿ.ರಾಮಮೂರ್ತಿ, ಚಿಂತಲಪಲ್ಲಿ ಸೋಮಶೇಖರ್, ಕಿಶೋರ್ ಕುಮಾರ್, ಮಂಜುಳ ಜಗದೀಶ್, ಅಶ್ವತ್ಥನಾರಾಯಣಾಚಾರ್, ಮುಂತಾದ ಕಲಾವಿದರು ಸಂಗೀತೋತ್ಸವವನ್ನು ನಡೆಸಿಕೊಟ್ಟರು. ಪಿಟೀಲು ವಿದ್ವಾಂಸರಾದ ಜಿ.ಎನ್.ಶ್ಯಾಮಸುಂದರ್, ಜಗದೀಶ್ ಕುಮಾರ್, ಸಂಜೀವ್ ಕುಮಾರ್, ಗೋವರ್ಧನ್, ಶ್ರೀಹರಿ, ಶಶಿಕುಮಾರ್, ಕಲ್ಯಾಣ್ ಕುಮಾರ್, ಮೃದಂಗ, ತಬಲ, ಖಂಜಿರ, ಘಟಂ, ಮೋರ್ಚಿಂಗ್ ವಿದ್ವಾಂಸರಾದ ಎಸ್.ವಿ.ನಾರಾಯಣಸ್ವಾಮಿ, ರಾಮ್ ಕುಮಾರ್, ಮೋಹನ್, ಅಶ್ವತ್ಥನಾರಾಯಣಾಚಾರ್, ಪ್ರಶಾಂತ್, ಲಕ್ಷ್ಮೀನಾರಾಯಣ, ಕೃಷ್ಣಮೂರ್ತಿ, ನಾಗೇಂದ್ರ, ನಿತ್ಯಾನಂದ ಸಂಗೀತೋತ್ಸವವನ್ನು ನಡೆಸಿಕೊಟ್ಟರು.
ನಾದಸುಧಾರಸ ಬಾಲಕೃಷ್ಣ ಭಾಗವತರು, ಶ್ರೀ ವೀರಾಂಜನೇಯಸ್ವಾಮಿ ಪದ್ಮಶಾಲಿ ಭಕ್ತಮಂಡಳಿ ಟ್ರಸ್ಟ್ ಅಧ್ಯಕ್ಷ ಬಿ.ಲಕ್ಷ್ಮೀನಾರಾಯಣಪ್ಪ, ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ್, ಸಾಕಾ ಲಕ್ಷ್ಮೀನಾರಾಯಣಪ್ಪ ಹಾಜರಿದ್ದರು.