Sidlaghatta : ಶಿಡ್ಲಘಟ್ಟ ನಗರದ 2ನೇ ನಗರ್ತಪೇಟೆಯಲ್ಲಿನ ಶ್ರೀ ಮಹೇಶ್ವರಿ ದೇವಿ ದೇವಾಲಯದಲ್ಲಿ ಮಂಡಲ ಪೂಜೆ ಹಾಗೂ ನವರಾತ್ರಿ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಹೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ದೇವಾಲಯದ ಆವರಣದಲ್ಲಿ ಹೋಮ ನಡೆಸಲಾಯಿತು.
ದೇವಾಲಯದ ಜೀರ್ಣೋದ್ಧಾರ ಕೈಗೊಂಡ 48 ನೇ ದಿನದಂದು ಮಂಡಲ ಪೂಜೆ ನೆರವೇರಿಸಿದ್ದು ಮುಂದಿನ ಎಂಟು ದಿನಗಳ ಕಾಲವೂ ನವರಾತ್ರಿಯ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಅರ್ಚಕರಾದ ಶ್ರೀನಿವಾಸ್ ಮತ್ತು ಸುಬ್ರಮಣಿ ಅವರು ಎಲ್ಲ ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಎ. ನಾಗರಾಜ್, ಎಂ.ಮಂಜುನಾಥ್, ಜೆ.ಎಂ.ಬಾಲಕೃಷ್ಣ, ಅಫ್ಸರ್ ಪಾಷ, ಜೆ.ಜಿ.ಶಿವಕುಮಾರ್, ಜೆ.ಎಸ್.ರಾಜು, ಸಮೀವುಲ್ಲಾ, ಎಂ.ಶ್ರೀನಿವಾಸ್, ಸ್ಥಳೀಯರು ತಾಯಿಯ ದರ್ಶನ ಪಡೆದರು.