Sidlaghatta : ಶಿಡ್ಲಘಟ್ಟ ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 75ನೇ ಸ್ವಾತಂತ್ರೋತ್ಸವ ಅಂಗವಾಗಿ ಅಮೃತ ಯೋಜನೆಗಳಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ (Women Self Empowerment Groups) ಬೀಜಧನ ಕಾರ್ಯಕ್ರಮಡಿ (Seed Fund) ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ 1 ಲಕ್ಷ ರೂಗಳಂತೆ 50 ಸಂಘಗಳಿಗೆ 50 ಲಕ್ಷ ರೂಪಾಯಿಗಳ ಚೆಕ್ ಗಳನ್ನು ವಿತರಿಸಿ ಶಾಸಕ ವಿ.ಮುನಿಯಪ್ಪ (MLA V Muniyappa) ಅವರು ಮಾತನಾಡಿದರು.
ಮಹಿಳೆಯರು ಹಣವನ್ನು ದುರುಪಯೋಗ ಮಾಡದೇ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು. ಸ್ವಸಹಾಯ ಗುಂಪುಗಳ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಒಂದು ಲಕ್ಷ ರೂ ಬೀಜಧನ ಚೆಕ್ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ನೌತಾಜ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ಎನ್.ಆರ್.ಎಂ.ಎಲ್ ಮೇಲ್ವಿಚಾರಕಿ ನಳಿನ, ಬ್ಲಾಕ್ ಸೊಸೈಟಿ ಅಧ್ಯಕ್ಷೆ ಭಾರತಿ, ಕಚೇರಿಯ ಮೇಲ್ವಿಚಾರಕಿಯರಾದ ರಾಧಮ್ಮ, ರೋಜಾರಮಣಿ, ಶಶಿಕಲಾ ಹಾಜರಿದ್ದರು