Sidlaghatta : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ (Sri Patanjali Yoga Shikshana Samiti) ಶಿಡ್ಲಘಟ್ಟ ಶಾಖಾ ವತಿಯಿಂದ ಶುಕ್ರವಾರ ಮುಂಜಾನೆ ರಕ್ಷಾಬಂಧನ (Raksha Bandhan) ಕಾರ್ಯಕ್ರಮವನ್ನು ಶಿಡ್ಲಘಟ್ಟ ನಗರದ ಶ್ರೀ ವೇಣುಗೋಪಾಲಸ್ವಾಮಿ ಆವರಣದಲ್ಲಿ ಆಯೋಜಿಸಲಾಗಿತ್ತು. ಯೋಗಾಭ್ಯಾಸ ಮುಗಿದ ನಂತರ ಎಲ್ಲಾ ಯೋಗಬಂಧುಗಳು ಶ್ರದ್ಧಾಭಕ್ತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಕ್ಷಾಬಂಧನದ ಮಹತ್ವ ಅದರ ಹಿನ್ನೆಲೆ ಮತ್ತು ಹಲವು ವಿಚಾರಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಯೋಜಕ ಮು.ವೆಂಕಟೇಶ್ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಸುಂದರಾಚಾರಿ, ಪ್ರಾಂತ ಶಿಕ್ಷಣ ಪ್ರಮುಖ ಮತ್ತು ತಾಲ್ಲೂಕು ಕಾರ್ಯದರ್ಶಿ ಶ್ರೀಕಾಂತ್, ಸಮಿತಿಯ ವಿಶ್ವಸ್ತ ಮಂಡಳಿಯ ಸದಸ್ಯ ಕೇಶವಮೂರ್ತಿ, ಖಜಾಂಚಿ ಭಾಸ್ಕರ್, ವಿಸ್ತರಣಾ ಪ್ರಮುಖ ರಮಣ, ರಘು, ಡಿ.ವಿ.ವೆಂಕಟೇಶ್, ಶಿಕ್ಷಕರಾದ ಮೋಲಿನ, ವೀಣಾ, ಶ್ರೀನಿವಾಸ್, ಲಕ್ಷ್ಮೀ, ಸರಸ್ವತಿ, ರವಿ, ಮಲ್ಲಿಕಾರ್ಜುನ, ಆನೂರು ಚಿಕ್ಕಣ್ಣ ಹಾಜರಿದ್ದರು.