Home News ಕೊಲೆ ಪ್ರಕರಣದ ಭೇದಿಸಿದ ಶಿಡ್ಲಘಟ್ಟ ಪೊಲೀಸ್; ಆರೋಪಿ ಬಂಧನ

ಕೊಲೆ ಪ್ರಕರಣದ ಭೇದಿಸಿದ ಶಿಡ್ಲಘಟ್ಟ ಪೊಲೀಸ್; ಆರೋಪಿ ಬಂಧನ

0

ಆಗಸ್ಟ್ 27 ರ ಸಂಜೆ ವೇಳೆ ಜಂಗಮಕೋಟೆ ಬಳಿ ಕೊಲೆ ಸೂಲಿಬೆಲೆ ರಸ್ತೆಯಲ್ಲಿ ವ್ಯಾಪಾರಿಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಕೊಲೆ ಆರೋಪಿ ಹೊಸಕೋಟೆಯ ನವೀನ್ ಎಂಬುವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರಂಜನಮೂರ್ತಿ(52) ಕೊಲೆಗೀಡದ ವ್ಯಕ್ತಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಐಬಸಾಪುರದ ನಿವಾಸಿಯಾಗಿದ್ದ ಅವರು, ಜಂಗಮಕೋಟೆ ಕ್ರಾಸ್ ನಲ್ಲಿ ದಿನಸಿ ಅಂಗಡಿಯನ್ನಿಟ್ಟುಕೊಂಡಿದ್ದರು. ಅವರು ದಿನಸಿ ಅಂಗಡಿಯ ಜೊತೆಗೆ ವಾಹನಗಳನ್ನು ಕೊಂಡು ಮಾರುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
“ಕಳೆದ ಆರು ತಿಂಗಳಿನಿಂದ ನವೀನ್ ಎಂಬ ವ್ಯಕ್ತಿ ಹಣಕಾಸಿನ ಮತ್ತು ವಾಹನ ವಿಚಾರದಲ್ಲಿ ನಿರಂಜನಮೂರ್ತಿಯವರೊಂದಿಗೆ ವ್ಯವಹಾರ ನಡೆಸುತ್ತಿದ್ದರು. ಮಾರುತಿ ಆಮ್ನಿ ವಾಹನವನ್ನು ನವೀನ್ ಕಳೆದ ಹತ್ತು ದಿನಗಳ ಹಿಂದೆ ನಿರಂಜನಮೂರ್ತಿ ಅವರಿಗೆ 2 ಲಕ್ಷ 85 ಸಾವಿರಕ್ಕೆ ಮಾರಾಟ ಮಾಡಿದ್ದರು. ನಿರಂಜನಮೂರ್ತಿ ಅವರು ನಾನು 2 ಲಕ್ಷ ರೂಗಳನ್ನು ಮಾತ್ರ ಕೊಡುತ್ತೇನೆಂದಿದ್ದಾರೆ. ಈ ವಿಚಾರವಾಗಿ ಮಾತುಕತೆ ನಡೆಸಲು ಕರೆದೊಯ್ದ ನವೀನ್, ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ತಿವಿದು ಸಾಯಿಸಿದ್ದಾನೆ. ಕೊಲೆ ಮಾಡಿದ್ದ ಸ್ಥಳದ ಸ್ವಲ್ಪ ದೂರದಲ್ಲಿ ಮೃತ ದೇಹವನ್ನು ಬಿಸಾಡಿ, ಅಲ್ಲಿಂದ ಎಚ್.ಕ್ರಾಸ್ ಮೂಲಕ ಮೈಸೂರಿಗೆ ಹೋಗಿದ್ದಾನೆ. ತನಿಖೆ ನಡೆಸಿ ನಾವು ಆರೋಪಿಯನ್ನು ಬಂದಿಸಿದ್ದೇವೆ. ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ” ಎಂದು ಜಿಲ್ಲಾ ಪೊಲೀಸ್ ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು.
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

error: Content is protected !!