Sidlaghatta : ಶಿಡ್ಲಘಟ್ಟ:-ಅ,09- ದಿನಾಂಕ 10 ರಂದು 220 ಕೆವಿ ಚಿಂತಾಮಣಿ ಸ್ವೀಕರಣಾ ಮತ್ತು ವಿತರಣಾ ಕೇಂದ್ರ ಹಾಗೂ 220 ಕೆವಿ ಚಿಂತಾಮಣಿ ಸ್ವೀಕರಣಾ ಮತ್ತು ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 66/11 ಕೆವಿ ಚೀಮಂಗಲ, ವೈ ಹುಣಸೇನಹಳ್ಳಿ, ಗಂಜಿಗುಂಟೆ, ಪಲಿಚೆರ್ಲು, ದಿಬ್ಬರಹಳ್ಳಿ, ಮೇಲೂರು ಮತ್ತು ಶಿಡ್ಲಘಟ್ಟ ವಿದ್ಯುತ್ ಉಪ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಸದರಿ ವಿದ್ಯುತ್ ಉಪಕೇಂದ್ರಗಳ ಮೂಲಕ ವಿದ್ಯುತ್ ಸರಬರಾಜಾಗುವ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಗಳಲ್ಲಿ ದಿನಾಂಕ 10.11.2024 ರ ಬೆಳಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಗ್ರಾಮೀಣ ಮತ್ತು ನಗರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭು.ಬಿ ರವರು ತಿಳಿಸಿದ್ದಾರೆ.
- Advertisement -
- Advertisement -