Sidlaghatta : ತಾಲ್ಲೂಕು ಕಚೇರಿಯಲ್ಲಿ ನೂತನ ತಹಶೀಲ್ದಾರ್ ಆಗಿ ಎಂ.ಎನ್.ಸ್ವಾಮಿ ಶುಕ್ರವಾರ ಸಂಜೆ ಅಧಿಕಾರವನ್ನು ಸ್ವೀಕರಿಸಿದರು. ನಿರ್ಗಮಿತ ತಹಶೀಲ್ದಾರ್ ಬಿ.ಎಸ್.ರಾಜೀವ್ ಅವರು ಅಧಿಕಾರ ಹಸ್ತಾಂತರಿಸಿದರು,
ಹಿಂದಿನ ತಾಸಿಲ್ದಾರ್ ಬಿಎಸ್ ರಾಜೀವ್ ರವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು, ತಹಶಿಲ್ದಾರ್ ಬಿ.ಎಸ್.ರಾಜೀವ್ ರವರು ಮಾತನಾಡಿ ತಾಲ್ಲೂಕಿನ ಎಲ್ಲಾ ಕನ್ನಡಪರ, ರೈತಪರ, ದಲಿತ ಪರ ಹಾಗೂ ಮಾದ್ಯಮ ಮಿತ್ರರು, ಎಲ್ಲಾ ರಾಜಕೀಯ ಪ್ರತಿನಿಧಿಗಳು ಸುಮಾರು 2 ವರ್ಷಗಳ ಕಾಲ ಉತ್ತಮ ಸಹಕಾರ ನೀಡಿದ್ದಾರೆ, ಕೋವಿಡ್, ಪಕೃತಿ ವಿಕೋಪ ಸಂದರ್ಭಗಳಲ್ಲಿ ನಮ್ಮ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಲೇಕ್ಕಿಗರು, ಸಹಾಯಕರು, ಪಂಚಾಯಿತಿ ಅಧಿಕಾರಿಗಳು, ವೈದ್ಯರು, ಹಾಸ್ಟಲ್ ಕೆಲಸಗಾರರು ಎಲ್ಲಾರೂ ಒಂದು ಟೀಂ ಆಗಿ ಕೆಲಸ ಮಾಡಿ, ಕೋವಿಡ್ ಸಂದರ್ಭದಲ್ಲಿ ತಾಲೂಕಿನಲ್ಲಿ ಯಶಸ್ವಿ ಕಂಡಿದ್ದೇವೆ ಎಂದರು.
![Sidlaghatta New Tehsildar M N Swamy](https://www.sidlaghatta.com/wp-content/uploads/2023/02/04FEB23Sd2b-1024x683.jpg)
ಕೋವಿಡ್ ರೋಗಿ ಮೃತಪಟ್ಟಾಗ ತಾಲ್ಲೂಕು ಮಟ್ಟದ ಅಧಿಕಾರಿಗಳು ನಾವೆ ಮನೆಗಳಿಗೆ ಹೋಗಿ ಅವರ ಮನಸ್ಸು ಓಲೈಸಿ ಅಂತ್ಯಕ್ರಿಯೆ ಮಾಡಿದ್ದೇವೆ, ಹಿಂದಿನ ಡಿಸಿ ರವರು ಪ್ರಶಂಶೆ ಪಟ್ಟಿದ್ದರು.
ಸರ್ಕಾರದ ಆಸ್ತಿ ಉಳಿಸುವಲ್ಲಿ ಎಲ್ಲರೂ ಟೀಂ ಆಗಿ ಕೆಲಸಮಾಡಿದ್ದೇವೆ, ಮಾದ್ಯಮ ಮಿತ್ರರು ನಮ್ಮಗೆ ಹೆಚ್ಚರಿಕೆ ನೀಡಿ ಮಾರ್ಗ ತೋರಿಸಿದ್ದಾರೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಅದೇ ರೀತಿ ಮುಂದಿನ ತಹಶಿಲ್ದಾರ್ ಸ್ವಾಮಿರವರಿಗೆ ಉತ್ತಮ ಸಹಕಾರ ನೀಡಿ ಎಂದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲೀ ಸದಸ್ಯ ಮಾದೇನಹಳ್ಳಿ ರವಿ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷ ಡಿ.ಎಸ್.ಎನ್.ರಾಜು ಇತರರು ಹಾಜರಿದ್ದರು.