Sidlaghatta : “ನಗರದ ಸ್ವಚ್ಛತೆಯ ಜವಾಬ್ದಾರಿ ಕೇವಲ ನಗರಸಭೆಯದೇ ಎನ್ನುವ ಮನೋಭಾವ ಬಿಟ್ಟು, ಸಾರ್ವಜನಿಕರು ಸಹ ಸಹಕಾರ ನೀಡಬೇಕು” ಎಂದು ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ ಕರೆ ನೀಡಿದರು.
ಶುಕ್ರವಾರ, ನಗರದ ರಾಜೀವ್ ಗಾಂಧಿ ಬಡಾವಣೆಯ ಸರ್ಕಾರಿ ಪ್ರಾಥಮಿಕ ಕಿರಿಯ ಶಾಲೆಯ ಆವರಣದಲ್ಲಿ ಐನಾ ಸಂಸ್ಥೆ ಮತ್ತು ಲಿಯೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ತಮ್ಮ ಮನೆ ಸುತ್ತಮುತ್ತಲನ್ನು ಸ್ವಚ್ಛವಾಗಿ ಇಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ನಗರಸಭೆಯ ಸಿಬ್ಬಂದಿ ಪ್ರತಿದಿನ ಕಸ ವಿಲೇವಾರಿ ಕಾರ್ಯದಲ್ಲಿ ತೊಡಗಿದ್ದಾರೆ. ಮನೆ ಬಾಗಿಲಿಗೆ ಬರುವ ಕಸ ಸಂಗ್ರಹಣಾ ವಾಹನಗಳಿಗೆ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ನೀಡಿದರೆ ವಿಲೇವಾರಿ ಸುಗಮವಾಗುತ್ತದೆ. ಸಂಘ ಸಂಸ್ಥೆಗಳು ಮತ್ತು ನಾಗರಿಕರ ಸಹಕಾರದಿಂದ ಮಾತ್ರ ನಗರವನ್ನು ಸ್ವಚ್ಛವಾಗಿ ಕಾಯಲು ಸಾಧ್ಯ” ಎಂದರು.
ಲೀಯೋ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, “ಸಮಾಜವು ಸುಂದರವಾಗಿರಲು ಪ್ರತಿ ವ್ಯಕ್ತಿಯೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಕಾಯಬೇಕು. ಸ್ವಚ್ಛತೆಯ ಅಬಾವದಿಂದ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದನ್ನು ತಪ್ಪಿಸಲು, ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು” ಎಂದರು.
ಸ್ವಚ್ಛತಾ ಕಾರ್ಯದಲ್ಲಿ ಲಿಯೋ ಕ್ಲಬ್ ಕಾರ್ಯದರ್ಶಿ ಲೋಕೇಶ್, ಐನಾ ಸಂಸ್ಥೆಯ ಮುಖ್ಯಸ್ಥೆ ಲತಾ, ಶಾಲಾ ಮುಖ್ಯೋಪಾಧ್ಯಾಯ ಮುಜಮೀರ್, ಲಿಯೋ ಕ್ಲಬ್ ಸದಸ್ಯರಾದ ನಾಗಭೂಷಣ್, ಅಕ್ಷಿತ್, ದುರ್ಗಾಪ್ರಸಾದ್, ಮತ್ತು ನಗರಸಭೆ ಆರೋಗ್ಯ ನಿರೀಕ್ಷಕ ರಾಜೇಶ್ ಭಾಗವಹಿಸಿದರು.